ವಿದೇಶ

ಫೇಸ್ ಬುಕ್ ಬಳಕೆದಾರರ ಮಾಹಿತಿ ಸೋರಿಕೆ: ಕ್ಷಮೆಯಾಚಿಸಿದ ಜುಕರ್ ಬರ್ಗ್

ಫೇಸ್ ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಗರ್ ಬರ್ಗ್....

ಫೇಸ್ ಬುಕ್ ಬಳಕೆದಾರರ ಮಾಹಿತಿ ಸೋರಿಕೆ: ಕ್ಷಮೆಯಾಚಿಸಿದ ಜುಕರ್ ಬರ್ಗ್
ಜುಕರ್ ಬರ್ಗ್
Published On :
ಲಂಡನ್: ಫೇಸ್ ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಗರ್ ಬರ್ಗ್ ಅವರು ಬ್ರಿಟನ್ ನ ಬಹುತೇಕ ಎಲ್ಲಾ ರಾಷ್ಟ್ರೀಯ ದಿನ ಪತ್ರಿಕೆಗಳಲ್ಲಿ
ಫುಲ್ ಪೇಜ್ ಜಾಹೀರಾತು ನೀಡುವ ಮೂಲಕ ಕ್ಷಮೆಯಾಚಿಸಿದ್ದಾರೆ.
ನಿಮ್ಮ ಮಾಹಿತಿಯನ್ನು ರಕ್ಷಿಸುವುದು ನಮ್ಮ ಜಾವಾಬ್ದಾರಿ. ಅದನ್ನು ಕಾಪಾಡಲು ನಮಗೆ ಸಾಧ್ಯವಾಗದಿದ್ದರೆ, ಸೇವೆ ಮಾಡಲು ನಾವು ಅರ್ಹರಾಗುವುದಿಲ್ಲ ಎಂದು ಹಿಂಬದಿ ಪೇಜ್ ನ ಜಾಹೀರಾತಿನಲ್ಲಿ ಜುಕರ್ ಬರ್ಗ್ ಹೇಳಿದ್ದಾರೆ.
2014ರಲ್ಲಿ ವಿಶ್ವ ವಿದ್ಯಾಲಯದ ಸಂಶೋಧಕರೊಬ್ಬರು ಅಭಿವೃದ್ಧಿಪಡಿಸಿದ ಕ್ವೀಜ್ ನಲ್ಲಿ ಕೋಟ್ಯಾಂತರ ಜನರ ಫೇಸ್ ಬುಕ್ ದತ್ತಾಂಶ ಸೋರಿಕೆಯಾಗಿದೆ ಎಂದು ಜುಕರ್ ಬರ್ಗ್ ಒಪ್ಪಿಕೊಂಡಿದ್ದಾರೆ.
'ಇದು ನಂಬಿಕೆ ದ್ರೋಹ. ಹೀಗಾಗಿ ನಾನು ನಿಮ್ಮ ಕ್ಷಮೆಯಾಚಿಸುತ್ತಿದ್ದೇನೆ ಮತ್ತು ಈ ರೀತಿಯ ತಪ್ಪುಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುವುದಾಗಿ' ಫೇಸ್ ಬುಕ್ ಮುಖ್ಯಸ್ಥರು ಜಾಹೀರಾತು ಮೂಲಕ ಭರವಸೆ ನೀಡಿದ್ದಾರೆ.
ಈಗಗಾಲೇ ಫೇಸ್ ಬುಕ್ ತನ್ನ ನಿಯಮಗಳನ್ನು ಬದಲಾಯಿಸಿದೆ. ಹೀಗಾಗಿ ಮುಂದೆ ಯಾವುದೇ ಕಾರಣಕ್ಕೂ ಮಾಹಿತಿ ಸೋರಿಯಾಗುವುದಿಲ್ಲ ಎಂದಿದ್ದಾದೆ. ಆದರೆ 2016ರಲ್ಲಿ ಕೇಬ್ರಿಜ್ ಅನಾಲಿಟಕ್ ಬ್ರಿಟಿಷ್ ಸಂಸ್ಥೆ ಕೋಟ್ಯಾಂತರ ಅಮೆರಿಕನ್ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಕಾನೂನು ಬಾಹಿರವಾಗಿ ಪಡೆದುಕೊಂಡು ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸಹಕರಿಸಿತ್ತು ಎಂಬ ಆರೋಪದ ಬಗ್ಗೆ ಜುಕರ್ ಬರ್ಗ್ ಜಾಹೀರಾತಿನಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.