ವಿದೇಶ

ಹೆಚ್-1ಬಿ ವೀಸಾ ಹೊಂದಿರುವವರ ಪತಿ ಅಥವಾ ಪತ್ನಿಗೆ ಮಾನ್ಯತೆ ನಿರ್ಧಾರ ಕುರಿತು ಅಮೆರಿಕಾ ವಿಳಂಬ

ಹೆಚ್-1 ಬಿ ವೀಸಾ ಹೊಂದಿರುವವರ ಪತಿ ಅಥವಾ ಪತ್ನಿಗೆ ಮಾನ್ಯತೆ ನಿರ್ಧಾರ ಕುರಿತು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಸರ್ಕಾರ ವಿಳಂಬ ಮಾಡುತ್ತಿದೆ.

ಹೆಚ್-1ಬಿ ವೀಸಾ ಹೊಂದಿರುವವರ ಪತಿ ಅಥವಾ ಪತ್ನಿಗೆ ಮಾನ್ಯತೆ ನಿರ್ಧಾರ ಕುರಿತು ಅಮೆರಿಕಾ ವಿಳಂಬ
ಹೆಚ್ -1ಬಿ ವೀಸಾ
Published On :

ವಾಷಿಂಗ್ಟನ್ : ಹೆಚ್-1 ಬಿ ವೀಸಾ ಹೊಂದಿರುವವರ ಪತಿ ಅಥವಾ ಪತ್ನಿಗೆ  ಮಾನ್ಯತೆ  ನಿರ್ಧಾರ ಕುರಿತು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಸರ್ಕಾರ ವಿಳಂಬ ಮಾಡುತ್ತಿದೆ.

 ಈ ವೀಸಾಕ್ಕೆ  ಮಾನ್ಯತೆ ದೊರೆತರೆ  ಭಾರತದ ಅನೇಕ ನೌಕರರು ಹಾಗೂ ಅವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗುತ್ತದೆ.

 ಹೆಚ್ 4 ಹಾಗೂ ಹೆಚ್-1ಬಿ ವೀಸಾ ಹೊಂದಿರುವವರ ಪತಿ ಅಥವಾ ಪತ್ನಿಗೆ ಮಾನ್ಯತೆ ನೀಡುವುದರಿಂದ ಆರ್ಥಿಕತೆ ಮೇಲೆ  ಆಗುವ  ಪರಿಣಾಮ ಪರಾಮರ್ಶನೆಗಾಗಿ ಜೂನ್ ವರೆಗೂ ಕಾಲಾವಕಾಶ ನೀಡುವಂತೆ ಭದ್ರತಾ ಇಲಾಖೆ-ಡಿಹೆಚ್ಎಸ್  ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಅಮೆರಿಕಾದಲ್ಲಿ ಕೆಲಸ ಮಾಡಲು ಅನುಕೂಲವಾಗುವ  ಹಸಿರು ಕಾರ್ಡ್ ಪಡೆಯಲು ಹೆಚ್-1ಬಿ ವೀಸಾದಾರರು 2015ರಿಂದಲೂ ಕಾಯುತ್ತಿದ್ದಾರೆ.  ಇದನ್ನು ಒಬಾಮಾ ಸರ್ಕಾರದ  ಅವಧಿಯಲ್ಲಿ ಪರಿಚಯಿಸಲಾಗಿ್ತ್ತು.

ಹೆಚ್ -1ಬಿ ವೀಸಾ ಭಾರತ ಮತ್ತು ಚೀನಾದಿಂದ ಉದ್ಯೋಗ ಅರಸಿ ಅಮೆರಿಕಾಕ್ಕೆ ಬರುವ ಪ್ರತಿಭಾವಂತ ನೌಕರರನ್ನು ಆಕರ್ಷಿಸಿದೆ.  ಈ ವೀಸಾಕ್ಕೆ ಮಾನ್ಯತೆ ದೊರೆತರೆ ಹೆಚ್ಚಿನ ಸಂಖ್ಯೆಯಲ್ಲಿ  ಅಮೆರಿಕಾದಲ್ಲಿ ನೆಲೆಸಿರುವ  ಭಾರತೀಯ ನೌಕರರಿಗೆ ಅನುಕೂಲವಾಗಲಿದೆ.


 ಈ ವಿಚಾರದಲ್ಲಿ ಡಿಹೆಚ್ ಎಸ್ ಒಳ್ಳೆಯ ತೀರ್ಮಾನ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ  ಎಂಬುದಾಗಿ  ಕ್ಯಾಲಿಪೋರ್ನಿಯಾದಲ್ಲಿರುವ ಅನಿವಾಸಿ ಭಾರತಿಯ ಉದ್ಯಮಿ ಜಾನ್ಸಿ ಕುಮಾರ್  ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.