ವಿದೇಶ

ನೇರ ಪ್ರಸಾರದ ವೇಳೆಯಲ್ಲೇ ಸ್ಟುಡಿಯೋಗೆ ಬಂದು ನಿರೂಪಕಿ ತಲೆ ಮೇಲೆ ಕುಳಿತ ಪಕ್ಷಿ: ವಿಡಿಯೋ ವೈರಲ್

ಮಾಧ್ಯಮ ಕಚೇರಿಗೆ ಆಗಮಿಸಿದ್ದ ವಿಶೇಷ ಅತಿಥಿ ಕೆಲಕಾಲ ಸುದ್ದಿ ಓದುತ್ತಿದ್ದ ನಿರೂಪಕರನ್ನು ತಬ್ಬಿಬ್ಬುಗೊಳಿಸಿತ್ತು.

ನೇರ ಪ್ರಸಾರದ ವೇಳೆಯಲ್ಲೇ ಸ್ಟುಡಿಯೋಗೆ ಬಂದು ನಿರೂಪಕಿ ತಲೆ ಮೇಲೆ ಕುಳಿತ ಪಕ್ಷಿ: ವಿಡಿಯೋ ವೈರಲ್
ಸುದ್ದಿಮನೆಗೆ ಆಗಮಿಸಿದ ಪಕ್ಷಿ
Published On :
ಕ್ಯಾಲಿಫೋರ್ನಿಯಾ: ಮಾಧ್ಯಮ ಕಚೇರಿಗೆ ಆಗಮಿಸಿದ್ದ ವಿಶೇಷ ಅತಿಥಿ ಕೆಲಕಾಲ ಸುದ್ದಿ ಓದುತ್ತಿದ್ದ ನಿರೂಪಕರನ್ನು ತಬ್ಬಿಬ್ಬುಗೊಳಿಸಿತ್ತು. 
ಸುದ್ದಿಮನೆಯಲ್ಲಿ ಕೆಲವೊಮ್ಮೆ ಅಚ್ಚರಿ ಘಟನೆಗಳು ನಡೆಯುವುದು ಸಾಮಾನ್ಯ. ಇದೇ ರೀತಿ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಮಾಧ್ಯಮ ಕಚೇರಿಗೆ ಆಗಮಿಸಿದ್ದ ವಿಶೇಷ ಅತಿಥಿ ಕೆಲಕಾಲ ಸುದ್ದಿ ಓದುತ್ತಿದ್ದ ನಿರೂಪಕರನ್ನು ತಬ್ಬಿಬ್ಬುಗೊಳಿಸಿತ್ತು. ಹೌದು.. ಸ್ಯಾಂಡಿಯಾಗೋದಲ್ಲಿರುವ ಕೆಎಫ್ಎಂಬಿ ಟಿವಿ ಕಚೇರಿಗೆ ಆಗಮಿಸಿದ ಕಡುಕೆಂಪು ಹಕ್ಕಿ (Scarlet Bird) ನೇರವಾಗಿ ಸುದ್ದಿ ನೀಡುತ್ತಿದ್ದ ನಿರೂಪಕರ ತಲೆ ಮೇಲೆ ಕುಳಿತುಕೊಳ್ಳುವ ಮೂಲಕ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಮಾಡಿತ್ತು. 
ಮೊದಲಿಗೆ ನಿರೂಪಕಿನಿಚೆಲ್ ಮಡಿನಾ ಅವರ ತಲೆ ಮೇಲೆ ಕುಳಿತ ಪಕ್ಷಿ ಬಳಿಕ ಪಕ್ಕದಲ್ಲೇ ಇದ್ದ ಮತ್ತೋರ್ವ ನಿರೂಪಕ ಎರಿಕ್ ಕಹ್ನೆಟ್ ನ ಮೇಲೆ ಕುಳಿತುಕೊಂಡಿತು. ಈ ಘಟನೆ ನ್ಯೂಸ್ ರೂಂನಲ್ಲಿದ್ದ ಸಿಬ್ಬಂದಿಗಳನ್ನು ಕೆಲಕಾಲ ನಗೆಗಡಲಲ್ಲಿ ತೇಲಿಸಿತ್ತು. ಕಳೆದ ಫೆಬ್ರವರಿ 24ರಂದು ಈ ಘಟನೆ ನಡೆದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಎಫ್ಎಂಬಿ ಟಿವಿ ಕಚೇರಿಯಿಂದ ಸಮೀಪದಲ್ಲೇ ಸ್ಯಾನ್ ಡಿಯಾಗೋ ಮೃಗಾಲಯವಿದ್ದು, ಅಲ್ಲಿಂದಲೇ ಪಕ್ಷಿ ದಾರಿ ತಪ್ಪಿ ಬಂದಿರಬೇಕು ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.