ಐತಿಹಾಸಿಕ ಭೇಟಿ: ಹಸ್ತಲಾಘವದ ಮೂಲಕ ಕಿಮ್ ಜಾಂಗ್ ಉನ್, ಟ್ರಂಪ್ ಪರಸ್ಪರ ಸ್ವಾಗತ
ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಐತಿಹಾಸಿಕ ಭೇಟಿಗೆ ಸಿಂಗಾಪುರ ಸಾಕ್ಷಿಯಾಗಿದ್ದು, ವಿಶ್ವದ ಬದ್ಧ ವೈರಿಗಳೆಂದೇ ಕರೆಯಲ್ಪಡುತ್ತಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾದ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ.

Published On :
ಸಿಂಗಾಪುರ: ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಐತಿಹಾಸಿಕ ಭೇಟಿಗೆ ಸಿಂಗಾಪುರ ಸಾಕ್ಷಿಯಾಗಿದ್ದು, ವಿಶ್ವದ ಬದ್ಧ ವೈರಿಗಳೆಂದೇ ಕರೆಯಲ್ಪಡುತ್ತಿದ್ದ ಅಮೆರಿಕ ಮತ್ತು ಉ.ಕೊರಿಯಾದ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ.
ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಖಾಮುಖಿಯಾಗಿದ್ದು, ಹಸ್ತಲಾಘವದ ಮೂಲಕ ಪರಸ್ಪರ ಸ್ವಾಗತ ಕೋರಿದ್ದಾರೆ. ಈ ಐತಿಹಾಸಿಕ ದ್ವಿಪಕ್ಷೀಯ ಸಭೆಯಲ್ಲಿ ಭಾಷಾಂತರಕಾರರ ನೆರವಿನಿಂದ ಉಭಯ ನಾಯಕರು ಚರ್ಚೆ ನಡೆಸಿದರು.
ಉತ್ತರ ಕೊರಿಯಾ ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ಮೂಲಕ ವಿಶ್ವದ ದೊಡ್ಡಣ್ಣಗೆ ಸೆಡ್ಡು ಹೊಡೆದಿತ್ತು. ಆಗ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಟ್ರಂಪ್ ಸರ್ವನಾಶದ ಎಚ್ಚರಿಕೆ ನೀಡಿದ್ದರು. ಸದ್ಯ ಎರಡು ರಾಷ್ಟ್ರಗಳ ಅಧ್ಯಕ್ಷರು ಪ್ರತ್ಯೇಕ ಸಭೆ ನಡೆಯುತ್ತಿದ್ದು, ಸಭೆ ಬಳಿಕ ಅಲ್ಲಿ ಚರ್ಚೆಯಾದ ವಿಷಯಗಳನ್ನ ಮಾಧ್ಯಮಗಳ ಮುಂದೆ ತಿಳಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
USಅಮೆರಿಕsingaporeಸಿಂಗಾಪುರKim Jong UnNorth Koreaಉತ್ತರ ಕೊರಿಯಾDonald Trumpಕಿಮ್ ಜಾಂಗ್ ಉನ್Kim Trump MeetTrump-Kim summitಡೊನಾಲ್ಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


