ವಿದೇಶ

ಕದನ ವಿರಾಮ ಘೋಷಣೆಯಾದ ಕೆಲ ಗಂಟೆಗಳಲ್ಲೇ ತಾಲಿಬಾನ್ ಉಗ್ರರಿಂದ 20 ಅಫ್ಘಾನ್ ಯೋಧರ ಹತ್ಯೆ

ಕದನ ವಿರಾಮ ಘೋಷಣೆಯಾದ ಕೆಲ ಗಂಟೆಗಳಲ್ಲೇ ಅಪ್ಘಾನಿಸ್ತಾನದ 20 ಯೋಧರನ್ನು ತಾಲಿಬಾನ್ ಉಗ್ರರು ಹತ್ಯೆಗೈದಿದ್ದಾರೆ...

ಕದನ ವಿರಾಮ ಘೋಷಣೆಯಾದ ಕೆಲ ಗಂಟೆಗಳಲ್ಲೇ ತಾಲಿಬಾನ್ ಉಗ್ರರಿಂದ 20 ಅಫ್ಘಾನ್ ಯೋಧರ ಹತ್ಯೆ
ಸಾಂದರ್ಭಿಕ ಚಿತ್ರ
Published On :

ಕಾಬೂಲ್: ಕದನ ವಿರಾಮ ಘೋಷಣೆಯಾದ ಕೆಲ ಗಂಟೆಗಳಲ್ಲೇ ಅಪ್ಘಾನಿಸ್ತಾನದ 20  ಯೋಧರನ್ನು ತಾಲಿಬಾನ್ ಉಗ್ರರು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕುಂದಾಜ್ ಪ್ರಾಂತ್ಯದ ಕ್ವಾಲಾ- ಇ- ಜಾಲ್ ಜಿಲ್ಲೆಯಲ್ಲಿ ಭದ್ರತಾ ತಪಾಸಣಾ ಕೇಂದ್ರದ  ಮೇಲೆ  ತಾಲಿಬಾನ್ ಉಗ್ರರು ಬಹು ಹಂತದಲ್ಲಿ ಆಕ್ರಮಣ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಪೊಲೀಸ್ ವಕ್ತಾರ ಇಂಜಾಮುದಿನ್ ರೆಹಮಾನ್ ತಿಳಿಸಿದ್ದಾರೆ.

ಖ್ವಾಲಾ- ಇ-ಜಲ್ ಜಿಲ್ಲೆಯ ಭದ್ರತಾ ಪರಿಶೀಲನಾ ಕೇಂದ್ರದ ಮೇಲೆ ತಾಲಿಬಾನ್ ಉಗ್ರರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ ಸರ್ಕಾರದ 20 ಸಿಬ್ಬಂದಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಪವಿತ್ರ ರಂಜಾನ್ ಹಿನ್ನೆಲೆಯಲ್ಲಿ ಅಪ್ಘಾನಿಸ್ತಾನದಲ್ಲಿ ಮೂರು ದಿನಗಳ ಕಾಲ ಕದನ ವಿರಾಮವನ್ನು ತಾಲಿಬಾನ್ ಘೋಷಿಸಿತ್ತು. ಇದರಿಂದಾಗಿ ಅಪ್ಘಾನ್  ಭದ್ರತಾ ಪಡೆಗಳು ಯಾವುದೇ ರೀತಿಯ ದಾಳಿ ನಡೆದಿರಲಿಲ್ಲ.

ಜೂನ್ 14 ರಿಂದ ಪವಿತ್ರ ಈದ್ ಉಲ್ ಪಿತ್ತರ್ ಆರಂಭವಾಗಲಿದೆ.ದೇಶದೆಲ್ಲೆಡೆ ಈದ್ ಉದ್  ಆಚರಣೆಯ ಮೊದಲ, ಎರಡು ಹಾಗೂ ಮೂರನೇ ದಿನದಂದು  ದೇಶದ ವಿರೋಧಿ ಪಡೆಗಳ ಮೂಲಕ ಆಕ್ರಮಣಕಾರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆಲ್ ಮುಜಾಹಿದ್ದೀನ್ ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿತ್ತು ಎಂಬ ಹೇಳಿಕೆ ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.