ಫೇಸ್ ಬುಕ್ ಚೀನಾದ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಂಡಿದೆ: ವರದಿ
ಚೀನಾದ 4 ಕಂಪನಿ ಸೇರಿದಂತೆ ವಿಶ್ವಾದ್ಯಂತ 60 ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿರುವುದಾಗಿ ಫೇಸ್ಬುಕ್ ತಿಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Published On :
ವಾಷಿಂಗ್ಟನ್: ಲಂಡನ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಸುಮಾರು 8.7 ಕೋಟಿ ಫೇಸ್ ಬುಕ್ ಬಳಕೆದಾರರ ದತ್ತಾಂಶ ದುರ್ಬಳಕೆ ಮಾಡಿಕೊಂಡ ಹಗರಣದ ಬೆನ್ನಲ್ಲೇ, ಚೀನಾದ 4 ಕಂಪನಿ ಸೇರಿದಂತೆ ವಿಶ್ವಾದ್ಯಂತ 60 ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿರುವುದಾಗಿ ಫೇಸ್ಬುಕ್ ತಿಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವರದಿಯಲ್ಲಿರುವಂತೆ ಫೇಸ್ ಬುಕ್ ಸಂಸ್ಥೆ ಚೀನಾದ 4 ಸಂಸ್ಥೆ ಸೇರಿದಂತೆ ವಿಶ್ವದ ಇತರೆ 60 ಸಂಸ್ಥೆಗಳೊಂದಿಗೆ ತನ್ನ ಗ್ರಾಹಕರ ದತ್ತಾಂಶಗಳನ್ನು ಹಂಚಿಕೊಂಡಿದೆ. ಫೇಸ್ಬುಕ್ ಕಂಪನಿ ವಿಶ್ವದ ಮೂರನೇ ಅತಿ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯಾದ ಚೀನಾ ಹುವಾವೇ, ಕಂಪ್ಯೂಟರ್ ತಯಾರಿಕಾ ಕಂಪನಿ ಲೆನೋವೋ ಗ್ರೂಪ್, ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳಾದ ಒಪ್ಪೋ ಮತ್ತು ಟಿಎಲ್ಸಿ ಕಂಪನಿಗಳೊಂದಿಗೆ ತನ್ನ ಬಳಕೆದಾರರ ಮಾಹಿತಿ ಹಂಚಿಕೊಳ್ಳಲು ಫೇಸ್ಬುಕ್ ಒಪ್ಪಂದ ಮಾಡಿಕೊಂಡಿತ್ತು ಎಂದು ಫೇಸ್ಬುಕ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ ಎನ್ನಲಾಗಿದೆ.
ಜತೆಗೆ ಈಗಾಗಲೇ ಸುಮಾರು 30 ಕ್ಕೂ ಹೆಚ್ಚು ಕಂಪನಿಗಳೊಂದಿಗೆ ದತ್ತಾಂತ ಹಂಚಿಕೊಳ್ಳುವ ಸಂಬಂಧ ಮಾಡಿಕೊಂಡಿದ್ದ ಒಪ್ಪಂದವನ್ನು ಕೊನೆಗೊಳಿಸಲಾಗಿದೆ. ಹುವಾವೇ ಕಂಪನಿಯೊಂದಿಗಿನ ಒಪ್ಪಂದ ಈ ವಾರದ ಕೊನೆಗೆ ಕೊನೆಗೊಳ್ಳಲಿದೆ. ಉಳಿದ ಚೀನಾ ಕಂಪನಿಗಳೊಂದಿಗಿನ ಒಪ್ಪಂದವನ್ನು ಶೀಘ್ರ ಮುರಿದುಕೊಳ್ಳಲಾಗುವುದು ಎಂದು ಫೇಸ್ಬುಕ್ ತಿಳಿಸಿದೆ.
ಅಮೆರಿಕ ಆರೋಪದಲ್ಲಿ ಹುರುಳಿಲ್ಲ ಎಂದ ಚೀನಾ
ಚೀನಾದಲ್ಲಿ ತಯಾರಾದ ಮೊಬೈಲ್ಗಳ ಮೂಲಕ ಗೂಢಚಾರಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದಾಗಿ ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಈ ಹಿಂದೆಯೇ ತಿಳಿಸಿದ್ದರು. ಆದರೆ ಅಮೆರಿಕದ ಆರೋಪವನ್ನು ಚೀನಾ ನಿರಾಕರಿಸಿತ್ತು. ಸದ್ಯ ಇಂತಹ ಅವಘಡಗಳಿಗೆ ಫೇಸ್ಬುಕ್ ಅನುವು ಮಾಡಿಕೊಡುವುದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದ್ದು, ಹುವಾವೇ ಸೇರಿದಂತೆ ಯಾವುದೇ ಕಂಪನಿಗಳು ದತ್ತಾಂಶಗಳನ್ನು ಹಂಚಿಕೊಳ್ಳುವ ಮುನ್ನ ಕೂಲಂಕುಷವಾಗಿ ಪರೀಕ್ಷಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


