ಈದ್ ಗಾಗಿ ತಾಲಿಬಾನ್ ಜತೆ ಕದನ ವಿರಾಮ ಘೋಷಿಸಿದ ಅಫ್ಘಾನಿಸ್ತಾನ್
ರಂಜಾನ್ ಪ್ರಯುಕ್ತ ಅಫ್ಘಾನಿಸ್ತಾನ ಗುರುವಾರ ತಾಲಿಬಾನ್ ಜೊತೆ ಒಂದು ವಾರಗಳ ಕದನ ವಿರಾಮ ಘೋಷಿಸಿದೆ. ಆದಾಗ್ಯೂ...

Published On :
ಕಾಬುಲ್: ರಂಜಾನ್ ಪ್ರಯುಕ್ತ ಅಫ್ಘಾನಿಸ್ತಾನ ಗುರುವಾರ ತಾಲಿಬಾನ್ ಜೊತೆ ಒಂದು ವಾರಗಳ ಕದನ ವಿರಾಮ ಘೋಷಿಸಿದೆ. ಆದಾಗ್ಯೂ ಇಸ್ಲಾಮಿಕ್ ಸ್ಟೆಟ್ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜೂನ್ 12ರಿಂದ 19ರ ವರೆಗೆ ತಾಲಿಬಾನ್ ಜತೆ ಕದನ ವಿರಾಮ ಘೋಷಿಸಿರುವುದಾಗಿ ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಟ್ವೀಟ್ ಮಾಡಿದ್ದಾರೆ.
2001ರಲ್ಲಿ ಅಮೆರಿಕದ ಆಕ್ರಮಣದ ನಂತರ ಇದೆ ಮೊದಲ ಬಾರಿಗೆ ಅಫ್ಘಾನಿಸ್ತಾನ್ ಕದನ ವಿರಾಮ ಘೋಷಿಸಿದೆ. ಆದರೆ ಇದಕ್ಕೆ ತಾಲಿಬಾನ್ ಒಪ್ಪಿಕೊಂಡಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಫ್ಘಾನಿಸ್ತಾನ ಕದನ ವಿರಾಮ ಘೋಷಿಸಿರುವ ಕುರಿತು ನಾವು ನಮ್ಮ ಅಧಿಕಾರಿಗಳೊಂದಿಗೆ ಪರಿಶೀಲಿಸುತ್ತಿರುವುದಾಗಿ ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಅವರು ಎಎಫ್ ಪಿಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


