ಸಿಂಗಾಪುರದ ಆರ್ಕಿಡ್ ಗೆ ಪ್ರಧಾನಿ ನರೇಂದ್ರ ಮೋದಿ ಹೆಸರು
ಸಿಂಗಾಪುರದಲ್ಲಿರುವ ರಾಷ್ಟ್ರೀಯ ಆರ್ಕಿಡ್ ಗಾರ್ಡನ್ ನಲ್ಲಿರುವ ವಿಶಿಷ್ಟ ಆರ್ಕಿಡ್ ಪುಷ್ಪಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲಾಗಿದೆ.

Published On :
ಸಿಂಗಾಪುರ: ಸಿಂಗಾಪುರದಲ್ಲಿರುವ ರಾಷ್ಟ್ರೀಯ ಆರ್ಕಿಡ್ ಗಾರ್ಡನ್ ನಲ್ಲಿರುವ ವಿಶಿಷ್ಟ ಆರ್ಕಿಡ್ ಪುಷ್ಪಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲಾಗಿದೆ.
ಸಿಂಗಾಪುರಕ್ಕೆ ಪ್ರವಾಸದಲ್ಲಿದ್ದಾಗ ಪ್ರಧಾನಿ ಮೋದಿ ಅಲ್ಲಿನ ಆರ್ಕಿಡ್ ಗಾರ್ಡನ್ ಗೆ ಭೇಟಿ ನೀಡಿದ್ದರು. ಈ ಭೇಟಿಯ ಸವಿ ನೆನಪಿಗಾಗಿ ಉಷ್ಣವಲಯದಲ್ಲಿ ಬೆಳೆವ ಆರ್ಕಿಡ್ ಪುಷ್ಪಕ್ಕೆ ’ಡೆಂಡ್ರೋಬ್ರಿಯಮ್ ನರೇಂದ್ರ ಮೋದಿ’ ಎಂದು ಹೆಸರನ್ನಿಡಲಾಗಿದೆ.
ಈ ಕುರಿತಂತೆ ಭಾರತ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರಆದ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಈ ಗಿಡವು ಸುಮಾರು 38 ಸೆಂಟಿ ಮೀಟರ್ ಉದ್ದ ಬೆಳೆಯುತ್ತದೆ. 14–20 ಹೂವುಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.
ಐದು ದಿನಗಳ ಕಾಲ ಮೂರು ರಾಷ್ಟ್ರಗಲ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ಮೋದಿ ಕಡೆಯ ದಿನ ಸಿಂಗಾಪುರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮಾರಿಯಮ್ಮ ದೇವಾಲಯ, ಬೌದ್ಧ ಮಂದಿರ,ಗಳಿಗೆ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PM Narendra Modiಪ್ರಧಾನಿ ನರೇಂದ್ರ ಮೋದಿsingaporeಸಿಂಗಾಪುರDendrobrium Narendra ModiNational Orchid Gardenಡೆಂಡ್ರೋಬ್ರಿಯಮ್ ನರೇಂದ್ರ ಮೋದಿರಾಷ್ಟ್ರೀಯ ಆರ್ಕಿಡ್ ಗಾರ್ಡನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


