ಪಾಕಿಸ್ತಾನ ಚುನಾವಣೆ ಅಧಿಕೃತ ಫಲಿತಾಂಶ: ಇಮ್ರಾನ್ ಖಾನ್ ಸಾರಥ್ಯದ ಪಿಟಿಐ ಅತಿದೊಡ್ಡ ಪಕ್ಷ, 116 ಸೀಟು
ಪಾಕಿಸ್ತಾನದ ಸಾವ್ರರ್ತಿಕ ಚುನಾವಣೆಯ ಅಧಿಕೃತ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಸ್ಪರ್ಧಿಸಿದ್ದ 270 ಕ್ಷೇತ್ರಗಳ ಪೈಕಿ 116 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಸಾರಥ್ಯದ ತೆಹ್ರಿಕ್ ಇ- ಇನ್ಸಾಪ್ ಪಕ್ಷ ಗೆಲುವು ಸಾಧಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ .

ಇಸ್ಲಾಮಾಬಾದ್ : ಪಾಕಿಸ್ತಾನದ ಸಾವ್ರರ್ತಿಕ ಚುನಾವಣೆಯ ಅಧಿಕೃತ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಸ್ಪರ್ಧಿಸಿದ್ದ 270 ಕ್ಷೇತ್ರಗಳ ಪೈಕಿ 116 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಸಾರಥ್ಯದ ತೆಹ್ರಿಕ್ ಇ- ಇನ್ಸಾಪ್ ಪಕ್ಷ ಗೆಲುವು ಸಾಧಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ .
ಜುಲೈ 25 ರಂದು ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸೋತ ಪಕ್ಷಗಳ ಮುಖಂಡರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಅಧಿಕೃತ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗಿತ್ತು.
ಜೈಲಿನಲ್ಲಿರುವ ಮಾಜಿ ಪ್ರಧಾನಿ ನವಾಜ್ ಷರೀಪ್ ಅವರ ಪಾಕಿಸ್ತಾನ್ ಮುಸ್ಲಿ ಲೀಗ್ ನವಾಜ್ ( ಪಿಎಂಎಲ್ -ಎನ್ ಪಕ್ಷ 64, ಮತ್ತು ಮಾಜಿ ಅಧ್ಯಕ್ಷ ಅಸಿಪ್ ಆಲಿ ಜರ್ದಾರಿ ಅವರ ಪಿಪಿಪಿ 43 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ ತಿಳಿಸಿದೆ.
ಎಂಎಂಎಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
13 ಸ್ವತಂತ್ರ ಅಭ್ಯರ್ಥಿಗಳು ಕೂಡಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸರ್ಕಾರ ರಚನೆಯಲ್ಲಿ ಇವರು ಪಿಐಟಿ ಪಕ್ಷದೊಂದಿಗೆ ಪ್ರಮುಖವಾದ ಪಾತ್ರ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


