ಪ್ರಾಣ ಪಣಕ್ಕಿಟ್ಟು ಗುಹೆಯೊಳಗಿದ್ದ ಬಾಲಕರನ್ನು ರಕ್ಷಿಸಿ ಹೊರಬಂದ ವೈದ್ಯನಿಗೆ ಕಾದಿತ್ತು ದೊಡ್ಡ ಶಾಕ್!
ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದ ವೈದ್ಯನ ಜೊತೆ ವಿಧಿ ಆಟವಾಡಿದೆ...

Published On :
ಮಾಯ್ ಸಾಯ್: ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದ ವೈದ್ಯನ ಜೊತೆ ವಿಧಿ ಆಟವಾಡಿದೆ.
ಜಗತ್ತಿನ ಅತ್ಯಂತ ಖ್ಯಾತನಾಮ ವೈದ್ಯರ ಪೈಕಿ ಒಬ್ಬರೆನಿಸಿರುವ ಆಸ್ಟ್ರೇಲಿಯಾದ ರಿಚರ್ಡ್ ಹ್ಯಾರಿಸ್ ಗುಹೆಯೊಳಗಿದ್ದವರನ್ನು ರಕ್ಷಿಸಿ ಹೊರ ಬಂದ ತಕ್ಷಣ ಅವರಿಗೊಂದು ಬಿಗ್ ಶಾಕ್ ಕಾದಿತ್ತು.
ಪ್ರಾಣವನ್ನೇ ಪಣಕ್ಕಿಟ್ಟು ಬಾಲಕರನ್ನು ರಕ್ಷಿಸಿದ್ದ ಹ್ಯಾರಿ ಹೊರಬರುತ್ತಿದ್ದಂತೆಯೇ ಕುಸಿದು ಬಿದ್ದಿದ್ದರು. ಅದಕ್ಕೆ ಕಾರಣವಾಗಿದ್ದು ಅವರ ತಂದೆಯ ಸಾವಿನ ಸುದ್ದಿ. ಹೌದು ಹ್ಯಾರಿ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಅವರ ತಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು.
ಹ್ಯಾರಿ ವೃತ್ತಿಯ ಜೊತೆಗೆ ನೀರಿನಾಳದಲ್ಲೂ ಮುಳುಗುವ ತರಬೇತಿ ಪಡೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ನೀರಿನಲ್ಲಿ ಮುಳುಗಿ, ಅಲ್ಲಿನ ಬಂಡೆಗಲ್ಲನ್ನು ಹತ್ತಿ, ಕೆಸರಿನ ನಡುವೆ ಸಾಗಿ ಆ ಕಾರ್ಗತ್ತಲ ಗುಹೆಯೊಳಗೆ ಔಷದ ಉಪಕರಣಗಳನ್ನು ಹೊತ್ತೊಯ್ದ ಹ್ಯಾರಿ ಗುಹೆಯೊಳಗೆ ಸಿಲುಕಿದ್ದ 13 ಮಂದಿ ಆರೋಗ್ಯ ಪರೀಕ್ಷೆ ಮಾಡಿದರು. ಅವರ ಈ ಸಾಹಸವನ್ನು ವಿಶ್ವವೇ ಕೊಂಡಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


