ವಿದೇಶ

ಅಮೆರಿಕಾ ಜೊತೆಗಿನ ಪಾಕ್ ಸಂಬಂಧ ಒತ್ತಡದಲ್ಲಿರುವುದು ಸತ್ಯ: ಪಾಕ್ ರಾಯಭಾರಿ

ಅಮೆರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ಪಾಕಿಸ್ತಾನದ ಸಂಬಂಧವು "ಒತ್ತಡದಲ್ಲಿದೆ" ಎಂದು ಪಾಕಿಸ್ತಾನದ ರಾಯಭಾರಿ ಒಪ್ಪಿಕೊಂಡಿದ್ದಾರೆ.

ಅಮೆರಿಕಾ ಜೊತೆಗಿನ ಪಾಕ್ ಸಂಬಂಧ ಒತ್ತಡದಲ್ಲಿರುವುದು ಸತ್ಯ: ಪಾಕ್ ರಾಯಭಾರಿ
ಅಮೆರಿಕಾದೊಡನೆ ಪಾಕ್ ಸಂಬಂಧ ಒತ್ತಡದಲ್ಲಿರುವುದು ಸತ್ಯ, ವಾಸ್ತವವನ್ನು ಒಪ್ಪಿದ ಪಾಕ್ ರಾಯಭಾರಿ
Published On :

ವಾಷಿಂಗ್ ಟನ್: ಅಮೆರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ಪಾಕಿಸ್ತಾನದ ಸಂಬಂಧವು "ಒತ್ತಡದಲ್ಲಿದೆ" ಎಂದು ಪಾಕಿಸ್ತಾನದ ರಾಯಭಾರಿ ಒಪ್ಪಿಕೊಂಡಿದ್ದಾರೆ.  ವಾಷಿಂಗ್ ಟನ್ ನಲ್ಲಿರುವ ಪಾಕಿಸ್ತಾನ ರಾಯಭಾರಿಯು ಅಮೆರಿಕಾ ಎಂದೂ ಇಸ್ಲಾಮಾಬಾದ್ ನ್ನು ತೀರಾ ಅಲ್ಪ ಎಂದು ಪರಿಗಣಿಸಬಾರದು ಎಚ್ಚರಿಸಿದ್ದಾರೆ. 

"ಪ್ರಸ್ತುತ, ಅಮೆರಿಕಾ-ಪಾಕಿಸ್ತಾನದ ಸಂಬಂಧ ಒತ್ತಡದಲ್ಲಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ಕೆಲವೊಮ್ಮೆ ನಾವು ಅಫ್ಘಾನಿಸ್ತಾನದ ಕಾರಣಕ್ಕೆ ಕೆಟ್ಟವರಾಗಿ ಕಾಣಿಸುತ್ತೇವೆ, ಅಮೆರಿಕಾವು  ಆಫ್ಘಾನಿಸ್ತಾನದಲ್ಲಿ ಅಭಿವೃದ್ದಿ ಕಾಣುತ್ತಿಲ್ಲವಾದುದರಿಂದ ನಮ್ಮನ್ನು ದೂರಿದೆ ಎನ್ನಬಹುದು.  ಆದರೆ ಇದೇ ಕಾರಣದಿಂಡಾದಿ ನಮ್ಮನ್ನು ಅಲ್ಪರೆಂದು ಪರಿಗಣಿಸುವ ಅಮೆರಿಕಾ ದೃಷ್ಟಿಕೋನವನ್ನು ಣಾವು ಖಂಡಿಸುತ್ತೇವೆ" ಪಾಕಿಸ್ತಾನದ ರಾಯಭಾರಿ ಐಜಾಜ್ ಅಹಮದ್ ಚೌಧರಿ ಹೇಳಿದ್ದಾರೆ.
"ಕೆಲವೊಮ್ಮೆ ಅಮೆರಿಕಾದ ಹೊಸ ಪ್ರತಿಸ್ಪರ್ಧಿಯಾದ ಚೀನಾದ ದೃಷ್ಟಿಯಿಂದ ನಮ್ಮನ್ನು ಕಾಣಲಾಗುತ್ತದೆ. ಪಾಕಿಸ್ತಾನವು ಚೀನಾದೊಡನೆ ಸ್ನೇಹ ಸಂಬಂಧ ಹೊಂದಿದೆ. ಆದರೆ ಚೀನಾ ಅಮೆರಿಕಾದೊಡನೆ ಉತ್ತಮ ಬಾಂಧವ್ಯ ಹೊಂದಿಲ್ಲದಿರುವುದು ಇದಕ್ಕೆ ಕಾರಣವಿರಬೇಕು.
"ಇನ್ನು ಕೆಲವೊಮ್ಮೆ ಭಾರತದ ದೃಷ್ಟಿಯಿಂದ ಅಮೆರಿಕಾ ನಮ್ಮನ್ನು ಗಮನಿಸಿದಾಗ ಭಾರತ ಅಮೆರಿಕಾದೊಡನೆ ಅದರ ಕಾರ್ಯತಂತ್ರಗಳಲ್ಲಿ ಉತ್ತಮ ಪಾಲುದಾರ ರಾಷ್ಟ್ರವಾಗಲು ಬಯಸುತ್ತಿದೆ. ಇದರ ಮೂಲಕ ಇಂಡೋ ಫೆಸಿಪಿಕ್ ವಿಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಣೆಗಾಗಿ ಅದು ಎದುರು ನೋಡುತ್ತಿದೆ. ಇಲ್ಲಿ ಪಾಕಿಸ್ತಾನವು ಭಾರತದೊಡನೆ ಉತ್ತಮ ಸಂಬಂಧ ಹೊಂದಿಲ್ಲ, ನಾವು ಪರಸ್ಪರ ಸ್ನೇಹದಿಂದಿರಲು ತಕ್ಕ ವಾತಾವರಣವಿಲ್ಲಿಲ್ಲ ಎನ್ನಬಹುದು.
"ಇನ್ನು ಭಯೋತ್ಪಾದನೆ ವಿರೋಧಿ ದೃಷ್ಟಿಯನ್ನಿಟ್ಟುಕೊಂಡು ನೊಡುವುದಾದಲ್ಲಿ ಪಾಕಿಸ್ತಾನದ ಮಟ್ಟಿಗೆ ಇದು ಅತ್ಯಂತ ಕಠಿಣ ಪರಿಸ್ಥಿತಿಯಾಗಿದೆ. ಅಮೆರಿಕಾ ನಮ್ಮನ್ನು ಈ ರೀತಿ ಣಾನಾ ವಿಧವಾಗಿ ಪರಿಗಣಿಸುತ್ತಾ ನಮ್ಮ ಜತೆ ವ್ಯವಹರಿಸಲು ಹಿಂಡೇಟು ಹಾಕುತ್ತಿರುವುದು ಉಚಿತವಲ್ಲ"  ಅವರು ಹೇಳಿದರು.
ಅಫ್ಘಾನ್ ಗಡಿಯಲ್ಲಿನ ತಾಲಿಬಾನ್ ಉಗ್ರರು ಮತ್ತು ಹಕ್ಕಾನಿ ಸಂಘಟನೆ ಭಯೋತ್ಪಾದನೆ ಗುಂಪುಗಳ ಮೇಲೆ ಕಠಿಣ ಕ್ರಮ ಜರುಗಿಸುವಲ್ಲಿ ವಿಪಲವಾದ ಹಿನ್ನೆಲೆಯಲ್ಲಿ  ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಭದ್ರತಾ ನೆರವು ನೀಡುವ ಕ್ರಮದಿಂಡ ಅಮೆರಿಕಾ ಇತ್ತೀಚೆಗೆ ಹಿಂದಕ್ಕೆ ಸರಿದಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.