ಭಗತ್ ಸಿಂಗ್‌ಗೆ 'ನಿಶಾನ್ ಎ ಹೈದರ್' ಶೌರ್ಯ ಪ್ರಶಸ್ತಿ ನೀಡಿ: ಪಾಕ್ ಸರ್ಕಾರಕ್ಕೆ ಆಗ್ರಹ
ಪಂಜಾಬ್ ಪ್ರಾಂತ್ಯದ ಭಗತ್ ಸಿಂಗ್ ಸ್ಮಾರಕ ಫೌಂಡೇಶನ್ ಪಾಕಿಸ್ತಾನದ ಅತ್ಯುನ್ನತ 'ನಿಶಾನ್ ಎ ಹೈದರ್' ಶೌರ್ಯ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ....

Published On :
ಲಾಹೋರ್: ಪಂಜಾಬ್ ಪ್ರಾಂತ್ಯದ ಭಗತ್ ಸಿಂಗ್ ಸ್ಮಾರಕ ಫೌಂಡೇಶನ್ ಪಾಕಿಸ್ತಾನದ ಅತ್ಯುನ್ನತ 'ನಿಶಾನ್ ಎ ಹೈದರ್' ಶೌರ್ಯ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ಗೆ ಮರಣೋತ್ತರವಾಗಿ ನೀಡಬೇಕೆಂದು ಪಾಕ್ ಸರ್ಕಾರವನ್ನು ಆಗ್ರಹಿಸಿದೆ.
ಶೌರ್ಯ ಪ್ರಶಸ್ತಿ ಜತೆಗೆ ಪಾಕಿಸ್ತಾನದ ಲಾಹೋರ್ ನ ಶಾಡ್ಮನ್ ಚೌಕ್ ಗೆ ಭಗತ್ ಸಿಂಗ್ ಎಂದು ಮರುನಾಮಕರಣ ಮಾಡಬೇಕೆಂದೂ ಫೌಂಡೇಶನ್ ಆಗ್ರಹಿಸಿದೆ. ಈ ಬಗ್ಗೆ ಅರ್ಜಿ ಸಲ್ಲಿಸಿರುವ ಫೌಂಡೇಶನ್ ಅದರಲ್ಲಿ ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರು ಭಗತ್ ಸಿಂಗ್ ಅವರಂಥ ಕೆಚ್ಚೆದೆಯ ದೇಶಪ್ರೇಮಿ ಮತ್ತೊಬ್ಬರಿಲ್ಲ ಎಂದಿರುವುದನ್ನು ಉಲ್ಲೇಶಿಸಿದೆ.
ಲಾಹೋರ್ ನ ಶಾಡ್ಮನ್ ಚೌಕ್ ಗೆ ಭಗತ್ ಸಿಂಗ್ ಚೌಕ್ ಎಂದು ಮರುನಾಮಕರಣ ಮಾಡಬೇಕೆಂಬ ಫೌಂಡೇಶನ್ ಆಗ್ರಹಕ್ಕೆ ಮುಂಬೈ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯೀದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


