ವಿಜ್ಞಾನಿಗಳು, ಎಂಜಿನಿಯರಿಂಗ್ ಪದವೀಧರರನ್ನು ತಯಾರಿಸುವಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ
2014ರಲ್ಲಿ ವಿಶ್ವದಾದ್ಯಂತ ಅಧ್ಯಯನ ಮುಗಿಸಿ ಹೊರಬಂದಿರುವ 7.5 ದಶಲಕ್ಷ ...

Published On :
ವಾಷಿಂಗ್ಟನ್: 2014ರಲ್ಲಿ ವಿಶ್ವದಾದ್ಯಂತ ಅಧ್ಯಯನ ಮುಗಿಸಿ ಹೊರಬಂದಿರುವ 7.5 ದಶಲಕ್ಷ ವಿಜ್ಞಾನಿಗಳು ಮತ್ತು ಎಂಜಿನಿಯರಿಂಗ್ ಪದವೀಧರರಲ್ಲಿ 4ರಲ್ಲಿ ಒಂದು ಭಾಗದಷ್ಟು ಮಂದಿ ಭಾರತೀಯರಾಗಿದ್ದಾರೆ ಎಂದು ವರದಿಯೊಂದು ಹೇಳಿದೆ.
ಸಂಶೋಧನೆ ಮತ್ತು ಅಭಿವೃದ್ಧಿ ವೇಗದಲ್ಲಿ ಅಮೆರಿಕಾ ಮುಂಚೂಣಿಯಲ್ಲಿದೆ ಎಂದು ವಿಜ್ಞಾನ ಮತ್ತು ಎಂಜಿನಿಯರಿಂಗ್ ಸೂಚ್ಯಂಕ 2018ರ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ ನ ವಾರ್ಷಿಕ ವರದಿ ಹೇಳುತ್ತದೆ.
ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಚೀನಾಕ್ಕೆ ವಿಶೇಷ ಸ್ಥಾನವಿದೆ ಎಂದು ವರದಿ ಹೇಳಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಮೆರಿಕಾ ಜಾಗತಿಕ ಮಟ್ಟದ ನಾಯಕನಾಗಿದೆ. ಆದರೂ, ಜಾಗತಿಕ ಮಟ್ಟದಲ್ಲಿ ಇದರ ಹಂಚಿಕೆ ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆಯಾಗುತ್ತಿದೆ ಮತ್ತು ಚೀನಾ ಬೆಳವಣಿಗೆ ಹೊಂದುತ್ತಿದೆ.
ಇತ್ತೀಚಿನ ಅಂದಾಜಿನ ಪ್ರಕಾರ, 2014ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಡಾಕ್ಟರೇಟ್ ಪದವಿ ಪಡೆದವರಲ್ಲಿ ಅಮೆರಿಕನ್ನರು ಮುಂಚೂಣಿಯಲ್ಲಿದ್ದು(40,000 ಪದವೀಧರರು), ನಂತರದ ಸ್ಥಾನದಲ್ಲಿ ಚೀನಾ(34,000), ರಷ್ಯಾ(19,000), ಜರ್ಮನಿ(15,000), ಇಂಗ್ಲೆಂಡ್(14,000) ಮತ್ತು ಭಾರತ(13,000) ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


