ತಮಿಳರೊಂದಿಗೆ ಪೊಂಗಲ್ ಆಚರಿಸಿದ ಕೆನಡಾ ಪ್ರಧಾನಿ!
ತಮಿಳರ ಸಾಂಪ್ರದಾಯಿಕ ಹಬ್ಬ ಪೊಂಗಲ್ ಅನ್ನು ಕೆನಡಾ ಪ್ರಧಾನಿ ವಿಶಿಷ್ಟವಾಗಿ ಆಚರಿಸಿದ್ದು, ಕೆನಡಾದಲ್ಲಿರುವ ತಮಿಳರೊಂದಿಗೆ ಸೇರಿ ಪ್ರಧಾನಿ ಜಸ್ಟಿನ್ ಟ್ರುಡೊ ಪೊಂಗಲ್ ಆಚರಣೆ ಮಾಡಿದ್ದಾರೆ.

Published On :
ಒಟ್ಟಾವಾ: ತಮಿಳರ ಸಾಂಪ್ರದಾಯಿಕ ಹಬ್ಬ ಪೊಂಗಲ್ ಅನ್ನು ಕೆನಡಾ ಪ್ರಧಾನಿ ವಿಶಿಷ್ಟವಾಗಿ ಆಚರಿಸಿದ್ದು, ಕೆನಡಾದಲ್ಲಿರುವ ತಮಿಳರೊಂದಿಗೆ ಸೇರಿ ಪ್ರಧಾನಿ ಜಸ್ಟಿನ್ ಟ್ರುಡೊ ಪೊಂಗಲ್ ಆಚರಣೆ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದು, ಒಟ್ಟಾವಾದಲ್ಲಿರುವ ಸ್ಕಾರ್ಬರೊದಲ್ಲಿ ತಮಿಳು ಸಮುದಾಯದ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ತೆರಳಿದ್ದ ಪ್ರಧಾನಿ ಜಸ್ಟಿನ್ ಟ್ರುಡೊ ಪೊಂಗಲ್ ಆಚರಣೆ ಮಾಡಿದರು.
ಅಲ್ಲದೆ ತಮಿಳು ಸಂಪ್ರದಾಯದ ತಿನಿಸಿಗಳನ್ನು ಕೂಡ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೇವಿಸಿದ್ದು, ದಕ್ಷಿಣ ಭಾರತದ ವಿವಿಧ ಖಾದ್ಯಗಳ ರುಚಿ ನೋಡಿದ್ದಾರೆ. ಈ ವೇಳೆ ಪೊಂಗಲ್ ನಿಮಿತ್ತ ತಮಿಳು ಸಂಪ್ರದಾಯದಂತೆ ಪಂಚೆ ಮತ್ತು ಶರ್ಟ್ ಧರಿಸುವ ಮೂಲಕ ಪ್ರಧಾನಿ ಜಸ್ಟಿನ್ ಟ್ರುಡೊ ಗಮನ ಸೆಳೆದರು. ಅಲ್ಲದೆ ತಮಿಳಿನಲ್ಲೇ ಅವರು ತಮಿಳಿಗರಿಗೆ ಶುಭ ಕೋರಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CanadaಕೆನಡಾTamil communityತಮಿಳು ಸಮುದಾಯOttawaPM Justin TrudeauPongal Celebrationಒಟ್ಟಾವಾಪ್ರಧಾನಿ ಜಸ್ಟಿನ್ ಟ್ರುಡೊಪೊಂಗಲ್ ಆಚರಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


