ಭಾರತ, ಚೀನಾ ಹವಾಮಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸಿವೆ: ವಿಶ್ವಸಂಸ್ಥೆ
ಇತರ ದೇಶಗಳು ಹವಾಮಾನ ಬದಲಾವಣೆಗೆ ಹೋರಾಡುವಲ್ಲಿ ವಿಫಲವಾಗುತ್ತಿರುವ ಮಧ್ಯೆ ಭಾರತ ಮತ್ತು ಚೀನಾ ಈ ಬಗ್ಗೆ ಬಲವಾದ ಬದ್ಧತೆಯನ್ನು ಹೊಂದಿವೆ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ...

Published On :
ವಿಶ್ವಸಂಸ್ಥೆ: ಇತರ ದೇಶಗಳು ಹವಾಮಾನ ಬದಲಾವಣೆಗೆ ಹೋರಾಡುವಲ್ಲಿ ವಿಫಲವಾಗುತ್ತಿರುವ ಮಧ್ಯೆ ಭಾರತ ಮತ್ತು ಚೀನಾ ಈ ಬಗ್ಗೆ ಬಲವಾದ ಬದ್ಧತೆಯನ್ನು ಹೊಂದಿವೆ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಹವಮಾನ ಬದಲಾವಣೆಯಲ್ಲಿ ಭಾರತ ಮತ್ತು ಚೀನಾ ಬಹಳ ದೃಢವಾದ ಬದ್ಧತೆಯನ್ನು ಹೊಂದಿವೆ. ಜಾಗತಿಕವಾಗಿ ಬದಲಾಗುತ್ತಿರುವ ಹವಾಮಾನದ ಮಾದರಿಗಳಲ್ಲಿ ಆಫ್ರಿಕನ್ ರಾಷ್ಟ್ರಗಳು ಅತಿದೊಡ್ಡ ಮಟ್ಟದಲ್ಲಿ ಬಲಿಪಶುಗಳಾಗಿವೆ.
ಹವಾಮಾನ ಬದಲಾವಣೆ ಹೋರಾಟದಲ್ಲಿ ನಾವು ಸೋಲು ಕಂಡಿಲ್ಲ. ಹಾಗಂತ ನಾವು ಇದರಲ್ಲಿ ಗೆಲುವು ಸಾಧಿಸಿಲ್ಲ ಎಂದು ನಿನ್ನೆ ನಡೆದ ಜಿ77 ಸಮಾರಂಭದಲ್ಲಿ ಆಂಟೋನಿಯೊ ಗುಟರ್ರೆಸ್ ಹೇಳಿದ್ದಾರೆ.
ಹವಾಮಾನ ಬದಲಾವಣೆಯ ಅತಿ ದೊಡ್ಡ ಬಲಿಪಶುಗಳು ಜಿ77 ನ ಸದಸ್ಯರಾಗಿದ್ದಾರೆಂದು ನನಗೆ ತಿಳಿದಿದೆ. ಆಫ್ರಿಕನ್ ದೇಶಗಳು ಬರ ಮತ್ತು ಜಲಕ್ಷಾಮದ ಸಮಸ್ಯೆಗೆ ಬಲಿಯಾಗಿವೆ. ಇನ್ನು ಕರಾವಳಿ ಅಥವಾ ಸಣ್ಣ ದ್ವೀಪದ ದೇಶಗಳು ಚಂಡಮಾರುತದ ಒಡೆತಕ್ಕೆ ಸಿಕ್ಕಿವೆ ಅಲ್ಲದೆ ಅಲ್ಲಿ ನೀರಿನ ಮಟ್ಟಗಳು ಹೆಚ್ಚುತ್ತಿವೆ ಎಂದರು.
ಆದರೆ ಇದೇ ಸಮಯದಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ಜಿ77 ಸದಸ್ಯ ರಾಷ್ಟ್ರಗಳಾಗಿರುವ ಚೀನಾ ಮತ್ತು ಭಾರತ ಹವಾಮಾನ ಕ್ರಮದಲ್ಲಿ ನಾಯಕತ್ವಕ್ಕೆ ಬಲವಾಗಿ ಬದ್ಧವಾಗಿರುತ್ತವೆ ಎಂದು ಆಂಟೋನಿಯೊ ಗುಟರ್ರೆಸ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


