ಇಸ್ರೇಲ್ ಪ್ರಧಾನಿ ನೇತನ್ಯಹು ಭಾರತ ಭೇಟಿ; ಚಿತ್ರೋದ್ಯಮ ಜೊತೆ ಸಮಾಲೋಚನೆ
ಜಾಗತಿಕ ಮನರಂಜನಾ ಉದ್ಯಮದಲ್ಲಿ ವಿಶ್ವದಲ್ಲಿ ಸಾಂಸ್ಕೃತಿಕ ಬಹಿಷ್ಕಾರ ಎದುರಿಸುತ್ತಿರುವ ...

Published On :
ಜೆರುಸಲೇಂ: ಜಾಗತಿಕ ಮನರಂಜನಾ ಉದ್ಯಮದಲ್ಲಿ ವಿಶ್ವದಲ್ಲಿ ಸಾಂಸ್ಕೃತಿಕ ಬಹಿಷ್ಕಾರ ಎದುರಿಸುತ್ತಿರುವ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೇತನ್ಯಹು, ವಿಶೇಷ ಸಂಯೋಜಿತ ಕಾರ್ಯಕ್ರಮ ಶಲೊಮ್ ಬಾಲಿವುಡ್ ನಲ್ಲಿ ಭಾರತೀಯ ಚಿತ್ರೋದ್ಯಮದ ಪ್ರಮುಖರನ್ನು ಭೇಟಿ ಮಾಡಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನವರಿ 14ರಿಂದ ನಾಲ್ಕು ದಿನಗಳ ಭೇಟಿಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಹು ಭಾರತಕ್ಕೆ ಆಗಮಿಸಲಿದ್ದು, ಜನವರಿ 18ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಜುಲೈಯಲ್ಲಿ ಇಸ್ರೇಲ್ ನ ತಮ್ಮ ನಿವಾಸದಲ್ಲಿ ಪತ್ನಿ ಸಾರಾ ಜೊತೆಗೆ ಭಾರತ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತಿಥ್ಯ ನೀಡಿದ್ದ ನೇತನ್ಯಹು ಜನವರಿ 16ರಂದು ಆಗ್ರಾದ ತಾಜ್ ಮಹಲ್ ಗೆ ಕೂಡ ಭೇಟಿ ನೀಡಲಿದ್ದಾರೆ.
ಇದೇ 15ರಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ನೇತನ್ಯಹು ಅವರನ್ನು ಪ್ರಧಾನಿಯವರು ಜನವರಿ 17ರಂದು ಅಹಮದಾಬಾದ್ ಗೆ ಕರೆದೊಯ್ಯಲಿದ್ದಾರೆ.ಅಲ್ಲಿ ಅವರು ಸಬರ್ಮತಿ ಆಶ್ರಮಕ್ಕೆ ಭೇಟಿ ಕೊಡಲಿದ್ದಾರೆ. ಈ ಹಿಂದೆ ಈ ಆಶ್ರಮಕ್ಕೆ ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ಕೊಟ್ಟಿದ್ದರು.
ಇಸ್ರೇಲ್ ಪ್ರಧಾನಿಯವರ ಪ್ರಮುಖ ಭೇಟಿ ಮುಂಬೈಯಲ್ಲಿ ಬಾಲಿವುಡ್ ನ ಪ್ರಮುಖ ನಿರ್ದೇಶಕರು, ನಿರ್ಮಾಪಕರು ಮತ್ತು ನಟರನ್ನು ಭೇಟಿ ಮಾಡಿ ಸಾಂಸ್ಕೃತಿಕ ಲೋಕದ ಬಗ್ಗೆ ಮಾತುಕತೆ ನಡೆಸುವುದಾಗಿದೆ. ಅಲ್ಲದೆ ಅಂದು ಅವರು ಮುಂಬೈಯಲ್ಲಿ ವಾಣಿಜ್ಯೋದ್ಯಮಿಗಳನ್ನು ಕೂಡ ಭೇಟಿ ಮಾಡಲಿದ್ದಾರೆ.
ಭಾರತೀಯ ಚಿತ್ರಗಳನ್ನು ನೇತನ್ಯಹು ಮತ್ತು ಅವರ ಪತ್ನಿ ಇಷ್ಟಪಡುತ್ತಿದ್ದರೂ ಕೂಡ ಅವರ ಈ ಭೇಟಿ ರಾಜಕೀಯ ಮಟ್ಟದ್ದಾಗಿದೆ ಎನ್ನುತ್ತವೆ ಮೂಲಗಳು. ಇಸ್ರೇಲ್ ವಿರುದ್ಧ ಹೇರಿರುವ ಸಾಂಸ್ಕೃತಿಕ ಬಹಿಷ್ಕಾರದ ವಿರುದ್ಧ ಅವರ ಹೋರಾಟವಾಗಿದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


