ವಾಯುಗಡಿ ಬಳಕೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಪ್ರಯಾಣಿಸಿದ್ದ ವಿಮಾನಕ್ಕೆ ಶುಲ್ಕ ವಿಧಿಸಿದ್ದ ಪಾಕ್!
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸಿದ್ದ ಏರ್ ಇಂಡಿಯಾ ವಿಮಾನ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಿದ್ದಕ್ಕಾಗಿ ಪಾಕಿಸ್ತಾನ 2.86 ಲಕ್ಷ ರೂ.ಗಳನ್ನು ಶುಲ್ಕವಾಗಿ ವಿಧಿಸಿತ್ತು ಎಂದು ತಿಳಿದುಬಂದಿದೆ.

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸಿದ್ದ ಏರ್ ಇಂಡಿಯಾ ವಿಮಾನ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಿದ್ದಕ್ಕಾಗಿ ಪಾಕಿಸ್ತಾನ 2.86 ಲಕ್ಷ ರೂ.ಗಳನ್ನು ಶುಲ್ಕವಾಗಿ ವಿಧಿಸಿತ್ತು ಎಂದು ತಿಳಿದುಬಂದಿದೆ.
ನಿವೃತ್ತ ಸೇನಾಧಿಕಾರಿ ಮತ್ತು ಹಾಲಿ ಆರ್ ಟಿಐ ಕಾರ್ಯಕರ್ತ ಲೋಕೇಶ್ ಬಾತ್ರಾ ಅವರು ಸಲ್ಲಿಕೆ ಮಾಡಿದ್ದ ಮಾಹಿತಿ ಹಕ್ಕು ಅರ್ಜಿಗೆ ಕೇಂದ್ರ ಸರ್ಕಾರ ಉತ್ತರಿಸಿರುವ ಮಾಹಿತಿಗಳಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆ ರಷ್ಯಾ, ಅಫ್ಘಾನಿಸ್ತಾನ, ಇರಾನ್ ಮತ್ತು ಖತಾರ್ ಗೆ ಪ್ರಧಾನಿ ಮೋದಿ ಪ್ರವಾಸ ಕೈಗೊಂಡಿದ್ದರು. ವೇಳೆ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಿದ್ದಕ್ಕಾಗಿ ಭಾರತಕ್ಕೆ ಪಾಕಿಸ್ತಾನ 2.86 ಲಕ್ಷ ರೂಗಳನ್ನು ಶುಲ್ಕವಾಗಿ ವಿಧಿಸಿತ್ತು ಎಂದು ತಿಳಿದುಬಂದಿದೆ.
ಅಲ್ಲದೆ 2016ರ ಜೂನ್ ತಿಂಗಳವರೆಗೂ ಪ್ರಧಾನಿ ಮೋದಿ ಒಟ್ಟು 11 ದೇಶಗಳ ಪ್ರವಾಸ ಮಾಡಿದ್ದು, ನೇಪಾಳ, ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಕತಾರ್, ಆಸ್ಟ್ರೇಲಿಯಾ, ಪಾಕಿಸ್ತಾನ, ರಷ್ಯಾ, ಇರಾನ್, ಫಿಜಿ ಮತ್ತು ಸಿಂಗಾಪುರ ದೇಶಗಳಲ್ಲಿ ಪ್ರಧಾನಿ ಮೋದಿ ಪ್ರವಾಸ ಮಾಡಿದ್ದರು. ಈ ಬಗ್ಗೆ ಲೋಕೇಶ್ ಬಾತ್ರಾ ಅವರು 2018ರ ಜನವರಿ 30ರಂದು ಮಾಹಿತಿ ಪಡೆದಿದ್ದರು.
2015ರ ಡಿಸೆಂಬರ್ 25ರಂದು ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ವಿಮಾನ ಲಾಹೋರ್ ನಲ್ಲಿ ಇಳಿದಿತ್ತು. ರಷ್ಯಾ ಮತ್ತು ಆಫ್ಘಾನಿಸ್ತಾನ ಪ್ರವಾಸದಿಂದ ಭಾರತಕ್ಕೆ ವಾಪಸ್ ಆಗುತ್ತಿದ್ದ ಮೋದಿ, ಅಂದಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ರನ್ನು ಭೇಟಿ ಮಾಡಿ, ಅವರಿಗೆ ಜನ್ಮ ದಿನದ ಶುಭ ಕೋರಿದ್ದರು. ಅಲ್ಲದೆ ಷರೀಫ್ ನಿವಾಸಕ್ಕೆ ತೆರಳಿ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಈ ವೇಳೆ ಪಾಕ್ ವಾಯುಗಡಿ ಪ್ರವೇಶ ಮಾಡಿದ್ದಕ್ಕೂ ಪಾಕಿಸ್ತಾನ 1.49 ಲಕ್ಷ ಶುಲ್ಕ ವಿಧಿಸಿದ್ದು, ಒಟ್ಟಾರೆ 2014ರಿಂದ 2016ರಲ್ಲಿ ಒಟ್ಟು ಎರಡು ಬಾರಿ ಪ್ರಧಾನಿ ಮೋದಿ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಿದ್ದಾರೆ ಎಂದು ಪಾಕಿಸ್ತಾನ ಒಟ್ಟು 2.86 ಲಕ್ಷ ರೂ.ಗಳನ್ನು ಶುಲ್ಕವಾಗಿ ಭಾರತಕ್ಕೆ ವಿಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


