ವಿದೇಶ

ಫ್ಲೋರಿಡಾದಲ್ಲಿ ವಿದ್ಯಾರ್ಥಿಯಿಂದ ಶೂಟೌಟ್: 17 ಸಾವು. ಹಲವರಿಗೆ ಗಾಯ

ಅಮೆರಿಕದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಶೂಟೌಟ್ ಮಾಡಿದ್ದು, ಘಟನೆಯಲ್ಲಿ 17 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಫ್ಲೋರಿಡಾದಲ್ಲಿ ವಿದ್ಯಾರ್ಥಿಯಿಂದ ಶೂಟೌಟ್: 17 ಸಾವು. ಹಲವರಿಗೆ ಗಾಯ
ಫ್ಲೋರಿಡಾದಲ್ಲಿ ಶೂಟೌಟ್
Published On :
ಫ್ಲೋರಿಡಾ: ಅಮೆರಿಕದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಶೂಟೌಟ್ ಮಾಡಿದ್ದು, ಘಟನೆಯಲ್ಲಿ 17 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನಲ್ಲಿರುವ ಡಗ್ಲಾಸ್ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿದ್ದು, ಶೂಟೌಟ್ ನಡೆಸಿದ ವಿದ್ಯಾರ್ಥಿಯನ್ನು 19 ವರ್ಷದ ನಿಕೋಲಸ್ ಕ್ರೂಸ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ನಿಕೋಲಸ್ ಕ್ರೂಸ್  ನನ್ನು ಈ ಹಿಂದೆ ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿತ್ತು. ಶಾಲೆಯಲ್ಲಿ ಅಶಿಸ್ತು ತೋರಿದ್ದರಿಂದ ಆತನ ವಿರುದ್ಧ ಶಾಲಾ ಆಡಳಿತ ಮಂಡಳಿ ಕಠಿಣ ಕ್ರಮಕೈಗೊಂಡಿತ್ತು.
ಇದೇ ಆಕ್ರೋಶದಲ್ಲಿ ನಿಕೋಲಸ್ ಕ್ರೂಸ್ ಶಾಲೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲೇ ಸುಮಾರು 17 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಶಾಲಾ ಸಿಬ್ಬಂದಿಗಳು ಮತ್ತು ಶಾಲಾ ಮಕ್ಕಳು ಇದ್ದರು ಎನ್ನಲಾಗಿದೆ.  ಇನ್ನು ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮಿಯಾಮಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ಶೂಟೌಟ್ ನಡೆಸಿದ ವಿದ್ಯಾರ್ಥಿಯನ್ನು ಫ್ಲೋರಿಡಾ ಪೊಲೀಸರು ಬಂಧಿಸಿದ್ದು, ಆತನನ್ನು  ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.