ವಿದೇಶ

'ಜೈ ಸೀತಾ ರಾಮ್' ಎಂದಿದ್ದ ಶೇಖ್ ಸುಲ್ತಾನ್: 2016ರ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿ ನೀಡಿರುವ ನಡುವೆಯೇ ಮುಸ್ಲಿಂ ರಾಷ್ಟ್ರದ ಶೇಖ್ ಸುಲ್ತಾನ್ 'ಜೈ ಸೀತಾ ರಾಮ್' ಎಂದು ಭಾಷಣ ಆರಂಭಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ...

'ಜೈ ಸೀತಾ ರಾಮ್' ಎಂದಿದ್ದ ಶೇಖ್ ಸುಲ್ತಾನ್: 2016ರ ವಿಡಿಯೋ ವೈರಲ್
ಅಬುಧಾಬಿ ಶೇಖ್ ಸುಲ್ತಾನ್
Published On :
ಅಬುಧಾಬಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿ ನೀಡಿರುವ ನಡುವೆಯೇ ಮುಸ್ಲಿಂ ರಾಷ್ಟ್ರದ ಶೇಖ್ ಸುಲ್ತಾನ್ 'ಜೈ ಸೀತಾ ರಾಮ್' ಎಂದು ಭಾಷಣ ಆರಂಭಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಸುಲ್ತಾನ್ ಸೊೌದ್ ಅಲ್-ಖಸ್ಸೆಮಿ ಅವರು 'ಜೈ ಸಿಯಾ ರಾಮ್' ಎಂದು ಭಾಷಣ ಆರಂಭಿಸಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸುಲ್ತಾನ್ ಸೊೌದ್ ಅಲ್-ಖಸ್ಸೆಮಿ ಎಮಿರೇಟ್ ನ ಅರಬ್ ವ್ಯವಹಾರಳ ವಕ್ತಾರರಾಗಿದ್ದರು. ರಾಮಕಥಾ ಕಾರ್ಯಕ್ರಮಕ್ಕೆ ಖಸ್ಸೆಮಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಮೊರಾರಿ ಬಾಪು ಅವರ ನೇತೃತ್ವದ ರಾಮ ಕಥಾ ಕಾರ್ಯಕ್ರಮದಲ್ಲಿ ಅಬುಧಾಬಿ ಶೇಖ್ ಸುಲ್ತಾನ್ ಜೈ ಸಿಯಾ ರಾಮ್ ಎಂದು ಭಾಷಣ ಆರಂಭಿಸಿದ್ದು, ಕಳೆದ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿರುವ ರಾಮಕಥಾ ಕಾರ್ಯಕ್ರಮದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.