ಯುಎಇಗೆ ಪ್ರಧಾನಿ ಮೋದಿ ಭೇಟಿ ಹಿನ್ನಲೆ: ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದ ಬುರ್ಜ್ ಖಲೀಫಾ!
ಮೂರು ರಾಷ್ಟ್ರಗಳ ಭೇಟಿ ನಿಮಿತ್ತ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದುಬೈ ಆಕರ್ಷಣೀಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದೆ.

Published On :
ಅಬುಧಾಬಿ: ಮೂರು ರಾಷ್ಟ್ರಗಳ ಭೇಟಿ ನಿಮಿತ್ತ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದುಬೈ ಆಕರ್ಷಣೀಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರ ಸ್ವಾಗತಕ್ಕೆ ಭಾರಿ ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ದುಬೈನ ಆಕರ್ಷಣೆಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸ್ವಾಗತ ಕೋರಲು ಸಿದ್ಧವಾಗಿದೆ.
ಇನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ತೆರಳಲಿದ್ದು, ಈ ವೇಳೆ ದುಬೈ ದೊರೆಗಳ ಭೇಟಿ ಮಾಡಲಿದ್ದಾರೆ. ಬಳಿಕ ದುಬೈ ಅಧಿಕಾರಿಗಳನ್ನು ಭೇಟಿ ಮಾಡಲಿರುವ ಅವರು ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಅಂತೆಯೇ ದುಬೈನಲ್ಲಿರುವ ಭಾರತ ಮೂಲದ ನಿವಾಸಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿಲಿದ್ದು, ಅವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ದುಬೈನ ಖ್ಯಾತನಾಮ ವಾಣಿಜ್ಯೋಧ್ಯಮಿಗಳೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ಭಾರತದಲ್ಲಿ ಹೂಡಿಕೆ ಮಾಡುವ ಸಂಬಂಧ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
ಬಳಿಕ ದುಬೈನಲ್ಲಿ ನಿರ್ಮಾಣವಾಗಿರುವ ಭವ್ಯ ಹಿಂದೂ ದೇಗುಲವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ಈ ಉದ್ಘಾಟನಾ ಸಮಾರಂಭ ಭಾರತ ಮತ್ತು ದುಬೈನಲ್ಲಿ ನೇರ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ. ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಇದಕ್ಕಾಗಿ ಒಪೆರಾ ಹೌಸ್ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಹಾಲಿ ಪ್ರವಾಸ ಯುಎಇಗೆ ಪ್ರಧಾನಿ ಮೋದಿ ಅವರ 2ನೇ ಭೇಟಿಯಾಗಿದ್ದು, ಈ ಹಿಂದೆ 2015ರಲ್ಲಿಯೂ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Burj Khalifaಬುರ್ಜ್ ಖಲೀಫಾಅಬುಧಾಬಿIndian flagAbudhabiPM Modi Visiti To UAEPM Modi\'s 3 Nation Visitಪ್ರಧಾನಿ ಮೋದಿ 3 ರಾಷ್ಟ್ರಗಳ ಪ್ರವಾಸಪ್ರಧಾನಿ ಮೋದಿ ಯುಎಇ ಪ್ರವಾಸಭಾರತ ತ್ರಿವರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


