ವಿದೇಶ

ಮಿಸ್ ವರ್ಚುವಲ್ ಕಜಕಿಸ್ತಾನ ಸೌಂದರ್ಯ ಸ್ಪರ್ಧೆಯ ಫೈನಲ್‌ನಲ್ಲಿ ಸ್ಪರ್ಧಿ ಮಾತು ಕೇಳಿ ದಂಗಾದ ಜಡ್ಜ್‌ಗಳು!

ಮಿಸ್ ವರ್ಚುವಲ್ ಕಜಕಿಸ್ತಾನ ಸೌಂದರ್ಯ ಸ್ಪರ್ಧೆಯಲ್ಲಿ ಸುಮಾರು 4 ಸಾವಿರ ಯುವತಿಯರನ್ನು ಹಿಂದಿಕ್ಕಿ ಫೈನಲ್ ತಲುಪಿದ್ದ ಸ್ಪರ್ಧಿ ಹೇಳಿದ ಮಾತು ಕೇಳಿ ಜಡ್ಜ್‌ಗಳೇ ದಂಗಾಗಿದ್ದಾರೆ...

ಮಿಸ್ ವರ್ಚುವಲ್ ಕಜಕಿಸ್ತಾನ ಸೌಂದರ್ಯ ಸ್ಪರ್ಧೆಯ ಫೈನಲ್‌ನಲ್ಲಿ ಸ್ಪರ್ಧಿ ಮಾತು ಕೇಳಿ ದಂಗಾದ ಜಡ್ಜ್‌ಗಳು!
ಇಲೆ ದ್ಯಾಗಿಲೇವ್
Published On :
ಮಿಸ್ ವರ್ಚುವಲ್ ಕಜಕಿಸ್ತಾನ ಸೌಂದರ್ಯ ಸ್ಪರ್ಧೆಯಲ್ಲಿ ಸುಮಾರು 4 ಸಾವಿರ ಯುವತಿಯರನ್ನು ಹಿಂದಿಕ್ಕಿ ಫೈನಲ್ ತಲುಪಿದ್ದ ಸ್ಪರ್ಧಿ ಹೇಳಿದ ಮಾತು ಕೇಳಿ ಜಡ್ಜ್‌ಗಳೇ ದಂಗಾಗಿದ್ದಾರೆ. 
22ರ ಹರೆಯದ ಇಲೆ ದ್ಯಾಗಿಲೇವ್ ಎಂಬಾತ ಅರಿನಾ ಅಲೀವಾ ಎಂಬ ಹೆಸರಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಂತಿಮ ಸುತ್ತಿನವರೆಗೂ ತನ್ನ ಮೈಮಾಟ, ವೈಯ್ಯಾರದ ನಡಿಗೆಯಿಂದ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿದ್ದ ಆದರೆ ಫೈನಲ್ ನಲ್ಲಿ ನಾನು ಅವಳಲ್ಲ, ಅವನು ಎಂದು ಹೇಳಿ ಎಲ್ಲರನ್ನೂ ಅಚ್ಚರಿಪಡಿಸಿದ್ದಾನೆ. 
ಮಿಸ್ ವರ್ಚುವಲ್ ಕಝಕಿಸ್ತಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಲೆಗೆ ಸೆಮಿ ಫೈನಲ್ ನಲ್ಲಿ ಆನ್ ಲೈನ್ ಮೂಲಕ ಸಾಕಷ್ಟು ಮಂದಿ ಓಟ್ ಮಾಡಿದ್ದರು. ಆದರೆ ಕೊನೆಯ ಹಂತದಲ್ಲಿ ಆಯೋಜಕರಿಗೆ ತಾನು ಸುಳ್ಳು ಹೇಳಿದ್ದ ಬಗ್ಗೆ ಬಹಿರಂಗಪಡಿಸಿದ್ದ. 
ಇಲೆ ಸತ್ಯವನ್ನು ಬಹಿರಂಗಪಡಿಸಿದ ನಂತರ ಆತನನ್ನು ಅಂತಿಮ ಸ್ಪರ್ಧಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದ್ದು ಇಲೆ ಜಾಗಕ್ಕೆ ಆತನ ನಂತರದ ಸ್ಥಾನ ಪಡೆದಿದ್ದ ಐಕೆರಿಮ್ ತೆಮಿರ್ ಖನೋವಾರನ್ನು ತರಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.