ತನ್ನದೇ ಮದುವೆ ಸುದ್ದಿಯ ವರದಿ ಮಾಡಿದ ಪಾಕ್ ಪತ್ರಕರ್ತ; ವಿಡಿಯೋ ವೈರಲ್
ಪತ್ರಕರ್ತರಿಗೆ ವಿಶ್ರಾಂತಿಯಿಲ್ಲ ಎಂಬುದಕ್ಕೆ ಇಲ್ಲೊಬ್ಬ ಪತ್ರಕರ್ತ ತನ್ನದೇ ಮದುವೆಯ ಸುದ್ದಿಯನ್ನು ವರದಿ ಮಾಡುವ ಮೂಲಕ ಇದನ್ನು ಸಾಬೀತುಪಡಿಸಿದ್ದಾನೆ...

Published On :
ನವದೆಹಲಿ: ಪತ್ರಕರ್ತರಿಗೆ ವಿಶ್ರಾಂತಿಯಿಲ್ಲ ಎಂಬುದಕ್ಕೆ ಇಲ್ಲೊಬ್ಬ ಪತ್ರಕರ್ತ ತನ್ನದೇ ಮದುವೆಯ ಸುದ್ದಿಯನ್ನು ವರದಿ ಮಾಡುವ ಮೂಲಕ ಇದನ್ನು ಸಾಬೀತುಪಡಿಸಿದ್ದಾನೆ.
ಪತ್ರಕರ್ತನ ಮದುವೆ ಸಮಾರಂಭದ ಸುದ್ದಿ, ಸುದ್ದಿ ವಾಹಿನಿಯೊಂದರಲ್ಲಿ ಪ್ರಕಟಗೊಂಡಿದ್ದು, ತನ್ನ ಮದುವೆ ಸಮಾರಂಭವನ್ನು ಪತ್ರಕರ್ತ ಸುದ್ದಿ ಮಾಡಿದ್ದಾನೆ. ಮದುವೆ ಮನೆಯಲ್ಲಿ ತನ್ನ ತಂದೆ, ಪತ್ನಿ, ಚಿಕ್ಕಮ್ಮ ಮತ್ತು ತಾಯಿಯನ್ನು ಸಂದರ್ಶನ ಮಾಡಿದ್ದಾನೆ.
ಪತ್ರಕರ್ತ ತನ್ನದೇ ಮದುವೆಯನ್ನು ಬ್ರೇಕಿಂಗ್ ನ್ಯೂಸ್ ಎಂದು ವರದಿ ಮಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವರು ಈ ವಿಡಿಯೋಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಎಂತಹ ಪತ್ರಿಕೋದ್ಯಮ ಬರುತ್ತಿದೆ... ಮುಂದೆ ಇನ್ನೇನು ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಇದು ಕೇವಲ ಪಾಕಿಸ್ತಾನದಲ್ಲಿ ಅಷ್ಟೇ... ಪತ್ನಿ, ತಾಯಿ ಹಾಗೂ ತಂದೆಯ ಸಂದರ್ಶವನ್ನು ನಡೆಸುವ ಮೂಲಕ ಒಬ್ಬ ಪತ್ರಕರ್ತ ತನ್ನದೇ ಮದುವೆ ಸಮಾರಂಭವನ್ನು ವರದಿ ಮಾಡಿಕೊಂಡಿದ್ದಾನೆ. ಇದು ಪತ್ರಿಕೋದ್ಯಮದ ನೈತಿಕತೆಯೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


