ಫೆ.6 ಅಂತರರಾಷ್ಟ್ರೀಯ ಸ್ತ್ರೀ ಜನನಾಂಗ ಊನ ವಿರೋಧಿ ದಿನ: ವಿಶ್ವಸಂಸ್ಥೆ ಘೋಷಣೆ
ಮಹಿಳೆಯರ ಮೇಲೆ ನಡೆಯುವ ಕ್ರೂರ ಹಿಂಸೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಎಂದು ವಿಶ್ವಸಂಸ್ಥೆ ಹೇಳಿದೆ.
Published On :
ಯುನೈಟೆಡ್ ನೇಷನ್ಸ್: ಮಹಿಳೆಯರ ಮೇಲೆ ನಡೆಯುವ ಕ್ರೂರ ಹಿಂಸೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಎಂದು ವಿಶ್ವಸಂಸ್ಥೆ ಹೇಳಿದೆ. ಇದಕ್ಕಾಗಿ ಫೆಬ್ರವರಿ 6ರ ದಿನವನ್ನು ಮಹಿಳೆಯರ ಜನನಾಂಗ ಊನ (ಎಫ್‌ಜಿಎಂ) ವಿರೋಧಿ ದಿನ ಎಂದು ಘೋಷಿಸಲಾಗಿದೆ.
ಮಹಿಳೆಯ ಜನನಾಂಗ ಊನ ಮಾಡುವ ವಿಚಿತ್ರ ಪದ್ದತಿ ಜಗತ್ತಿನ ಹಲವು ಭಾಗಗಳಲ್ಲಿ ಇನ್ನೂ ಜೀವಂತವಾಗಿದೆ. ಜಾಗತಿಕವಾಗಿ 20 ಕೋಟಿ ಯುವತಿಯರು ಈ ಅನಿಷ್ಟ ಪದ್ದತಿಯಿಂದ ತೊಂದರೆಗೀಡಾಗಿದ್ದಾರೆ. ಈ ಆಚರಣೆಯನ್ನು ವಿರೋಧಿಸಿ, ಇದನ್ನು ಕೊನೆಗೊಳಿಸಿ ಎಂದಿರುವ ವಿಶ್ವಸಂಸ್ಥೆ #endFGM ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.
ಧರ್ಮ, ಸಂಪ್ರದಾಯದ ಹೆಸರಲ್ಲಿ ಹೆಣ್ಣುಮಕ್ಕಳಲ್ನ್ನು ಹದ್ದುಬಸ್ತಿನಲ್ಲಿಡಲು ಕೆಲ ಜನ ಸಮುದಾಯಗಳು ಅವಳ ಜನನಾಂಗವನ್ನು ಊನಗೊಳಿಸುವ ಮಾರಕ ಆಚರಣೆಯಲ್ಲಿ ತೊಡಗಿಕೊಂಡಿವೆ. ಇದರಿಂದಾಗಿ ಕೆಲ ಹೆಣ್ಣುಮಕ್ಕಳ ಬದುಕೇ ಹಾನಿಗೊಳ್ಳುತ್ತದೆ. ಆಫ್ರಿಕಾ ಖಂಡದ ಹಲವು ರಾಷ್ಟ್ರಗಳಲ್ಲಿ ಹೆಚ್ಚಾಗಿರುವ ಈ ಆಚರಣೆಗೆ ಮಾನವ ಹಕ್ಕುಗಳನ್ನು ಜಾಗತಿಕವಾಗಿ ಪ್ರತಿಪಾದಿಸುವ ಬ್ರಿಟನ್ ನಿಷೇಧ ಹೇರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಶ್ವಸಂಸ್ಥೆUnited NationsFemale Genital MutilationInternational Day of Zero Tolerance for FGMಸ್ತ್ರೀ ಜನನಾಂಗದ ಊನಗೊಳಿಸುವಿಕೆಅಂತರರಾಷ್ಟ್ರೀಯ ಸ್ತ್ರೀ ಜನನಾಂಗ ಊನ ವಿರೋಧಿ ದಿನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

