ವಿದೇಶ

ಪಾಕ್ ನರಿ ಬುದ್ಧಿ: ಉಗ್ರ ಹಫೀಜ್ ಸಯೀದ್ ಮತ್ತು ಆತನ ಪಕ್ಷ ರಕ್ಷಣೆಗೆ ಪಾಕ್ ಸಚಿವನ ಶಪಥ, ವಿಡಿಯೋ ಲೀಕ್!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದನೆಯನ್ನು ನಿಗ್ರಹಿಸುವ ಸುಳ್ಳು ಭರವಸೆಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಅವರ ಸಂಪುಟದ ಸಚಿವ...

ಪಾಕ್ ನರಿ ಬುದ್ಧಿ: ಉಗ್ರ ಹಫೀಜ್ ಸಯೀದ್ ಮತ್ತು ಆತನ ಪಕ್ಷ ರಕ್ಷಣೆಗೆ ಪಾಕ್ ಸಚಿವನ ಶಪಥ, ವಿಡಿಯೋ ಲೀಕ್!
ಸಂಗ್ರಹ ಚಿತ್ರ
Published On :
ಲಾಹೋರ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದನೆಯನ್ನು ನಿಗ್ರಹಿಸುವ ಸುಳ್ಳು ಭರವಸೆಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಅವರ ಸಂಪುಟದ ಸಚಿವ 2008ರ ಮುಂಬೈ ದಾಳಿಕೋರ ಹಫೀಜ್ ಸಯೀದ್ ಮತ್ತು ಆತನ ಪಕ್ಷವನ್ನು ರಕ್ಷಿಸಲು ಶಪಥ ಮಾಡುತ್ತಿರುವ ವಿಡಿಯೋ ಇದೀಗ ಬಹಿರಂಗಗೊಂಡಿದೆ. 
ಬಹಿರಂಗಗೊಂಡಿರುವ ವಿಡಿಯೋದಲ್ಲಿ ಇಮ್ರಾನ್ ಖಾನ್ ಸಂಪುಟ ಸಚಿವ ಆಂತರಿಕ ರಾಜ್ಯ ಸಚಿವ ಶೆಹ್ಯಾಯಾರ್ ಆಫ್ರಿದಿ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ನಾಯಕರೊಂದಿಗೆ ಮಾತನಾಡುತ್ತಾ ಅಮೆರಿಕದ ಒತ್ತಡಿಂದಾಗಿ ಸಯೀದ್ ಪಕ್ಷವನ್ನು ಚುನಾವಣಾ ಆಯೋಗ(ಇಸಿಪಿ)ಯಿಂದ ರಾಜಕೀಯ ಪಕ್ಷವಾಗಿ ನೋಂದಾಯಿಸದೆ ಅವರ ಗಮನವನ್ನು ಸೆಳೆಯಲಾಯಿತು. ಇದು ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಲು ಇಸಿಪಿ ಯೋಜನೆ ಆಗಿತ್ತು. ಆದರೆ ಇದು ಸಂಭವಿಸಲು ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ. 
ನಮ್ಮ ಪಕ್ಷ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಅಧಿಕಾರದಲ್ಲಿರುವವರೆಗೂ ಪಾಕಿಸ್ತಾನಕ್ಕಾಗಿ ಧ್ವನಿ ಎತ್ತುತ್ತಿರುವ ಹಫೀಜ್ ಸಯೀದ್ ಸೇರಿದಂತೆ ಇತರರಿಗೂ ನಾವು ಬೆಂಬಲವನ್ನು ನೀಡುತ್ತೇವೆ ಎಂದು ಆಫ್ರಿದಿ ಹೇಳಿದ್ದಾರೆ. 
ಸಂಸತ್ ಗೆ ಬಂದು ನಾವು ಸರಿಯಾದ ದಾರಿಯಲ್ಲಿರುವವರನ್ನು ಬೆಂಬಲಿಸುತ್ತೇವೆಯೇ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಎಂದು ಎಂಎಂಎಲ್ ಸದಸ್ಯರಿಗೆ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.