ವಿದೇಶ

ಭಾರತಕ್ಕೆ ಗಡಿಪಾರು ತೀರ್ಪು ದುರದೃಷ್ಟಕರ- ವಿಜಯ್ ಮಲ್ಯ

ಇಂಗ್ಲೆಂಡ್ ನಿಂದ ಭಾರತಕ್ಕೆ ಗಡಿಪಾರು ಮಾಡಿ ಲಂಡನ್ ನ್ಯಾಯಾಲಯ ನೀಡಿರುವ ತೀರ್ಪು ದುರದೃಷ್ಟಕರವಾಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.

ಭಾರತಕ್ಕೆ ಗಡಿಪಾರು ತೀರ್ಪು ದುರದೃಷ್ಟಕರ- ವಿಜಯ್ ಮಲ್ಯ
ವಿಜಯ್ ಮಲ್ಯ
Published On :

ಲಂಡನ್ : ಇಂಗ್ಲೆಂಡ್ ನಿಂದ ಭಾರತಕ್ಕೆ ಗಡಿಪಾರು  ಮಾಡಿ  ಲಂಡನ್ ನ್ಯಾಯಾಲಯ ನೀಡಿರುವ ತೀರ್ಪು ದುರದೃಷ್ಟಕರವಾಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.

ಭಾರತದಲ್ಲಿ ಮಲ್ಯ ವಿರುದ್ಧ ದಾಖಲಾಗಿರುವ ವಂಚನೆ, ಅಕ್ರಮ ಹಣ ವರ್ಗಾವಣೆ, ಪಿತೂರಿ  ಪ್ರಕರಣಗಳಲ್ಲಿ ವಿಜಯ್ ಮಲ್ಯ ತಪಿತಸ್ಥ ಎಂದು ಕಂಡುಬಂದ ನಂತರ ವೆಸ್ಟ್ ಮಿನ್ ಸ್ಟರ್  ಮ್ಯಾಜಿಸ್ಟ್ರೇಟ್  ಕೋರ್ಟಿನ ಮುಖ್ಯ ಮ್ಯಾಜಿಸ್ಟ್ರೇಟ್  ನ್ಯಾಯಾಧೀಶರಾದ ಎಮ್ಮಾ ಅರ್ಬುಟ್ ನಾಟ್ ಆದೇಶ ಪ್ರಕಟಿಸಿದ್ದರು.

 ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ಮಲ್ಯ,  ಐಡಿಬಿಐ ಬ್ಯಾಂಕ್ ಗೆ ನಾನು ತಪ್ಪು ಮಾಹಿತಿ ನೀಡಿದ್ದೇನೆ. ಸಾಲದ ಹಣವನೆಲ್ಲಾ ದೋಚಿದ್ದೇನೆ ಎಂದು ಬಾವಿಸಿ ನ್ಯಾಯಾಧೀಶರು ಪೂರ್ವಪರ ವಿಚಾರಿಸದೆ ತೀರ್ಪು ಪ್ರಕಟಿಸಿರುವುದು ದುರದೃಷ್ಟಕರವಾಗಿದೆ ಎಂದರು.

ತನ್ನೆಲ್ಲಾ ಆಸ್ತಿ ಮಾರಾಟ ಮಾಡಿ ಸಾಲ ಮರುಪಾವತಿಸಲು  ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದನೇ. ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬೇಕು ಎಂದು ವಿಜಯ್ ಮಲ್ಯ ಹೇಳಿದ್ದಾರೆ.

ಮಲ್ಯ ಗಡಿಪಾರು ಪ್ರಕರಣ ಈಗ ಇಂಗ್ಲೆಂಡ್  ಗೃಹ ಕಾರ್ಯದರ್ಶಿಗೆ ವರ್ಗಾಯಿಸಲಾಗಿದೆ.  ಈ ಮಧ್ಯೆ ಮಲ್ಯ ಗಡಿಪಾರು ಮಾಡಿ ಲಂಡನ್ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಸಿಬಿಐ ಸ್ವಾಗತಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.