ಪ್ಯಾರೀಸ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ: 133 ಮಂದಿಗೆ ಗಾಯ, 412 ಜನರ ಬಂಧನ
ತೆರಿಗೆ ಹೆಚ್ಚಳ ಹಾಗೂ ತಲಾದಾಯದ ಇಳಿಕೆಯ ವಿರುದ್ಧ ಫ್ರಾನ್ಸ್ ರಾಜಧಾನಿ ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 133 ಮಂದಿ ಗಾಯಗೊಂಡರೆ....

Published On :
ಪ್ಯಾರೀಸ್: ತೆರಿಗೆ ಹೆಚ್ಚಳ ಹಾಗೂ ತಲಾದಾಯದ ಇಳಿಕೆಯ ವಿರುದ್ಧ ಫ್ರಾನ್ಸ್ ರಾಜಧಾನಿ ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 133 ಮಂದಿ ಗಾಯಗೊಂಡರೆ 412 ಮಂದಿಯನ್ನು ಬಂಧಿಸಲಾಗಿದೆ ಎಮ್ದು ಪ್ಯಾರೀಸ್ ಪೋಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ನಡೆದ ಪ್ರತಿಭಟನೆಯಲ್ಲಿ 23 ಪೊಲೀಸ್ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ.ಪ್ಯಾರೀಸ್ ನ ಕೇಂದ್ರ ಭಾಗದಲ್ಲಿ ಪ್ರತಿಭಟನೆ, ಹಿಂಸಾಚಾರದ ಕಾವು ತೀವ್ರವಾಗಿದ್ದು 378 ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.
ಹಳದಿ ಜಾಕೆಟ್ ಗಳನ್ನು ಧರಿಸಿರುವ ಕಾರ್ಯಕರ್ತರು ಕಾರ್ ಗಳ ಕಿಟಕಿಗಾಜನ್ನು ಒಡೆದಿದ್ದಾರೆ, ಅಂಗಡಿಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಕುರಿತಂತೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕರೂನ್ ಭಾನುವಾರ ಫ್ರೆಂಚ್ ಪ್ರಧಾನಿ, ಆಂತರಿಕ ಸಚಿವರೊಂದಿಗೆ ಭದ್ರತಾ ಸಂಬಂಧ ವಿಶೇಷ ತುರ್ತು ಸಭೆ ಆಯೋಜಿಸಿದ್ದಾರೆ.
ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ತೀಕ್ಷ್ಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ವಾಗ್ದಾನ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


