ವಿದೇಶ

ಹಿಂದೂ ಸಂಘಟನೆಗಳ ಪ್ರತಿಭಟನೆ: ಬಿಯರ್ ಬಾಟಲ್ ಮೇಲೆ ಭಗವಾನ್ ಗಣೇಶನ ಭಾವಚಿತ್ರ ಹಿಂಪಡೆದ ಸ್ಕಾಟಿಶ್ ಕಂಪನಿ

ಬಿಯರ್ ಬಾಟಲ್ ಮೇಲೆ ಭಗವಾನ್ ಗಣೇಶನ ಭಾವಚಿತ್ರ ಮುದ್ರಿಸಿದ್ದ ಸ್ಕಾಟಿಶ್ ಸಂಸ್ಥೆ ಹಿಂದೂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬಾಟಲ್ ಗಳ ಮೇಲಿದ್ದ ದೇವರ ಚಿತ್ರವನ್ನು ಹಿಂಪಡೆದಿದೆ.

ಹಿಂದೂ ಸಂಘಟನೆಗಳ ಪ್ರತಿಭಟನೆ:  ಬಿಯರ್ ಬಾಟಲ್ ಮೇಲೆ ಭಗವಾನ್ ಗಣೇಶನ ಭಾವಚಿತ್ರ ಹಿಂಪಡೆದ ಸ್ಕಾಟಿಶ್ ಕಂಪನಿ
ಹಿಂದೂ ಸಂಘಟನೆಗಳ ಪ್ರತಿಭಟನೆ: ಬಿಯರ್ ಬಾಟಲ್ ಮೇಲೆ ಭಗವಾನ್ ಗಣೇಶನ ಭಾವಚಿತ್ರ ಹಿಂಪಡೆದ ಸ್ಕಾಟಿಶ್ ಕಂಪನಿ
Published On :
ಬಿಯರ್ ಬಾಟಲ್ ಮೇಲೆ ಭಗವಾನ್ ಗಣೇಶನ ಭಾವಚಿತ್ರ ಮುದ್ರಿಸಿದ್ದ ಸ್ಕಾಟಿಶ್ ಸಂಸ್ಥೆ ಹಿಂದೂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬಾಟಲ್ ಗಳ ಮೇಲಿದ್ದ ದೇವರ ಚಿತ್ರವನ್ನು ಹಿಂಪಡೆದಿದೆ. 
ಸ್ಕಾಟಿಶ್ ನ ಗಡಿ ಭಾಗದಲ್ಲಿರುವ ಗ್ಯಾಲಾಶಿಯಲ್ಸ್ ನಗರದಲ್ಲಿದ್ದ ಬಿಯರ್ ಸಂಸ್ಥೆ ಇಂಡಿಯಾ ಪಿಲ್ಸ್ ಬಿಯರ್ ಬ್ರಾಂಡ್ ನ್ನು ಗಣೇಶನ ಭಾವಚಿತ್ರದೊಂದಿಗೆ ಮಾರಾಟ ಮಾಡುತ್ತಿತ್ತು. ನಮ್ಮ ಹಾಪ್ಪಿ ಪಿಲ್ಸ್ನರ್ ನೊಂದಿಗೆ  ನಿಮ್ಮೊಳಗಿನ ಗಣೇಶನನ್ನು ಕಂಡುಕೊಳ್ಳಿ ಎಲ್ಲಾ ಅಡೆತಡೆಗಳಿಂದಲೂ ಹೊರಬನ್ನಿ ಎಂಬ ಸಂದೇಶವನ್ನು ಪ್ರಕಟಿಸಲಾಗಿತ್ತು. 
ಆದರೆ ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಅಮೆರಿಕದ ಹಿಂದೂಪರ ಸಂಘಟಾನೆಗಳು ಟೆಂಪ್ಸೆಟ್ ಬ್ರಿವರಿಂಗ್ ಕೋ. ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ್ದು, ಪರಿಣಾಮ ಚಿತ್ರ ಹಾಗೂ ಸಂದೇಶವನ್ನು ತೆಗೆದುಹಾಕಿ, ಕ್ಷಮೆ ಕೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.