ಸಿಂಗಾಪುರ: ಅಪ್ರಾಪ್ತ ಬಾಲಕನನ್ನು ಸೆಕ್ಸ್ಗೆ ಬಳಸಿಕೊಂಡಿದ್ದಕ್ಕೆ ಭಾರತೀಯ ಮಹಿಳೆಗೆ ಜೈಲು ಶಿಕ್ಷೆ!
11 ವರ್ಷದ ಅಪ್ರಾಪ್ತ ಬಾಲಕನನ್ನು ಸೆಕ್ಸ್ಗೆ ಬಳಸಿಕೊಂಡಿದ್ದಕ್ಕೆ 33 ವರ್ಷದ ಭಾರತೀಯ ಮಹಿಳೆಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ...

Published On :
ಸಿಂಗಾಪುರ: 11 ವರ್ಷದ ಅಪ್ರಾಪ್ತ ಬಾಲಕನನ್ನು ಸೆಕ್ಸ್ಗೆ ಬಳಸಿಕೊಂಡಿದ್ದಕ್ಕೆ 33 ವರ್ಷದ ಭಾರತೀಯ ಮಹಿಳೆಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಸಿಂಗಾಪುರದಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆ ಮಾಲೀಕನ ಹನ್ನೊಂದು ವರ್ಷದ ಮಗನನ್ನು ಸೆಕ್ಸ್ಗೆ ಬಳಸಿಕೊಂಡಿದ್ದಳು. ಈ ಸಂಬಂಧ ಕೋರ್ಟ್ ಭಾರತೀಯ ಮಹಿಳೆಗೆ 18 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಜೈಲು ಶಿಕ್ಷೆಯನ್ನು ಏಳು ವರ್ಷಗಳಿಗೆ ಹೆಚ್ಚಿಸಿದೆ ಹಾಗೂ 10 ಲಕ್ಷ ರುಪಾಯಿ ದಂಡ ವಿಧಿಸಿದೆ.
ಮಹಿಳೆಯ ನಡೆಯಿಂದ ಸಂತ್ರಸ್ತ ಬಾಲಕನ ದೈಹಿಕವಾಗಿ ಹಾಗೂ ಮಾನಸಿಕವಾಗಿ ನೊಂದಿದ್ದು ಈ ಹಿನ್ನೆಲೆಯಲ್ಲಿ ಕೋರ್ಟ್ ಮಹಿಳೆ ಜೈಲು ಶಿಕ್ಷೆ ವಿಧಿಸಿದೆ.
2016ರಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಭಾರತೀಯ ಮಹಿಳೆ ಬಾಲಕನ ಜೊತೆ ಬಲವಂತವಾಗಿ ಸೆಕ್ಸ್ ಮಾಡುತ್ತಿದ್ದಳು. ಅಲ್ಲದೆ ಕೆಲ ವಿಡಿಯೋಗಳನ್ನು ತೋರಿಸಿ ಸೆಕ್ಸ್ ಮಾಡದಿದ್ದರೆ ನಿಮ್ಮ ಪೋಷಕರಿಗೆ ವಿಡಿಯೋ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಮಾಧ್ಯಮಗಳು ವರದಿ ಮಾಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


