ವಿದೇಶ

ಇಟಲಿಯಲ್ಲಿ ಸೇತುವೆ ಕುಸಿತ: ಕನಿಷ್ಟ 22 ಸಾವು

ಇಟಲಿಯ ಜಿನೊವಾದಲ್ಲಿ ಸೇತುವೆ ಕುಸಿದ ಪರಿಣಾಮ ಕನಿಷ್ಟ 22 ಮಂದಿ ಮೃತಪಟ್ಟಿದ್ದಾರೆ.

ಇಟಲಿಯಲ್ಲಿ ಸೇತುವೆ ಕುಸಿತ: ಕನಿಷ್ಟ 22 ಸಾವು
ಇಟಲಿಯಲ್ಲಿ ಸೇತುವೆ ಕುಸಿತ: ಕನಿಷ್ಟ 22 ಸಾವು
Published On :
ಜಿನೊವಾ: ಇಟಲಿಯ ಜಿನೊವಾದಲ್ಲಿ ಸೇತುವೆ ಕುಸಿದ ಪರಿಣಾಮ ಕನಿಷ್ಟ 22 ಮಂದಿ ಮೃತಪಟ್ಟಿದ್ದಾರೆ.
ಕರಾವಳಿ ನಗರ ಜಿನೊವಾದಲ್ಲಿ ಮ್ಂಗಳವಾರ ಸ್ಥಳೀಯ ಸಮಯ ಬೆಳಗ್ಗೆ 11.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಇಟಲಿಯಿಂದ ಫ್ರಾನ್ಸ್‌ ಸಂಪರ್ಕಿಸುವ ಅಂತರಾಷ್ಟ್ರಿಯ ಹೆದ್ದಾರಿಯ ನಡುವೆ 100 ಯಾರ್ಡ್‌ ಉದ್ದದ ಸೇತುವೆ ಕುಸಿದಿದೆ. ಎಡೆಬಿಡದೆ ಸುರಿಯುತ್ತಿದ್ದ ಗುಡುಗು ಸಹಿತ ಭಾರೀ ಮಳೆಯು ಈ ದುರಂತಕ್ಕೆ ಕಾರಣವೆನ್ನಲಾಗಿದೆ.
ಇಟಲಿಯ ಸಾರಿಗೆ ಇಲಾಖೆ ಉಪ ಸಚಿವರು ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಲಕ್ಷಣವಿದೆ ಎಂದಿದ್ದಾರೆ.
ಗಾಯಾಳುಗಳನ್ನು ಹೆಲಿಕಾಪ್ಟರ್ ಮುಖೇನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬದುಕುಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆ ನಡೆದ ವೇಳೆ 8-9 ವಾಹನಗಳು ಸೇತುವೆ ಮೇಲೆ ಪ್ರಯಾಣಿಸುತ್ತಿದ್ದವು. ಆಗ ಇದ್ದಕ್ಕಿದ್ದಂತೆ ಸೇತುವೆ ಕುಸಿದಿದೆ. ಹಲವರು ರಕ್ಷಣೆಗಾಗಿ ಕೂಗಿಕೊಳ್ಳುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇಂದು ಕುಸಿದು ಬಿದ್ದ ಸೇತುವೆಯನ್ನು 1960ರ ದಶಕದಲ್ಲಿ ಎ 10 ಟೋಲ್ ಮೋಟಾರ್ ವೇ ಗಾಗಿ ನಿರ್ಮಾಣ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.