ಹೆಚ್-1ಬಿ ಪತಿ, ಪತ್ನಿ ವೀಸಾ ಅನುಮತಿ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ
ಅಮೆರಿಕಾದಲ್ಲಿ ಕಾನೂನು ಬದ್ಧವಾಗಿ ವಾಸಿಸಲು ಅವಕಾಶ ಕಲ್ಪಿಸುವ ಹೆಚ್ -1ಬಿ ಪತಿ, ಪತ್ನಿ ವೀಸಾದಾರರಿಗೆ ಅನುಮತಿ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ ನಡೆಸಿದೆ.

ವಾಷಿಂಗ್ಟನ್ : ಅಮೆರಿಕಾದಲ್ಲಿ ಕಾನೂನು ಬದ್ಧವಾಗಿ ವಾಸಿಸಲು ಅವಕಾಶ ಕಲ್ಪಿಸುವ ಹೆಚ್ -1ಬಿ ಪತಿ, ಪತ್ನಿ ವೀಸಾದಾರರಿಗೆ ಅನುಮತಿ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ ನಡೆಸಿದೆ.
ಡೊನಾಲ್ಡ್ ಟ್ರಂಪ್ ಸರ್ಕಾರದ ಈ ನಡೆ ಸಾವಿರಾರು ಭಾರತೀಯರ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ಕಾನೂನು ತಜ್ಞರಿಗೆ ಪೆಢರಲ್ ಏಜೆನ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಏನಾದರೂ ಜಾರಿಗೆ ಬಂದಲ್ಲೀ ಒಬಾಮಾ ಮಾಡಿದ್ದ ಕಾನೂನು ರದ್ದುಗೊಂಡು ಅನುಮತಿ ಪಡೆದಿರುವ ಸುಮಾರು 70, 000ಕ್ಕೂ ಹೆಚ್ಚು ಹೆಚ್- 4 ವೀಸಾದಾರರ ಮೇಲೆ ಪರಿಣಾಮ ಬೀರಲಿದೆ.
ಹೆಚ್ -1ಬಿ ವೀಸಾ ಹೊಂದಿರುವ ಪತಿ, ಪತ್ನಿಯರಿಗೆ ಹೆಚ್-4 ವೀಸಾ ನೀಡಲಾಗುತ್ತದೆ. ಭಾರತದಿಂದ ವಲಸೆ ಹೋಗಿರುವ ಅನೇಕ ಮಂದಿ ಅತ್ಯುತ್ತಮ ಕೌಶಾಲ್ಯಾಧಾರಿತ ವೃತಿವರ್ಗ ಅಮೆರಿಕದಲ್ಲಿದ್ದು, ಭಾರತ-ಅಮೆರಿಕಾದವರು ಈ ವಿನಾಯಿತಿಯ ಫಲಾನುಭವಿಯಾಗಿದ್ದಾರೆ.
ಈ ಕಾನೂನಡಿ 100,100 ಕ್ಕೂ ಹೆಚ್ಚು ಹೆಚ್-4 ವೀಸಾದಾರರು ಫಲಾನುಭವಿಯಾಗಿದ್ದಾರೆ.2015ರಲ್ಲಿ ಕಾನೂನು ಜಾರಿಗೊಳಿಸಿದ್ದ ಒಬಾಮಾ ಆಡಳಿತ ಪತಿ, ಪತ್ನಿಯ ಕೆಲಸಕ್ಕೆ ಅನುಮತಿ ನೀಡಲಾಗಿತ್ತು. ನೌಕರಿ ಇಲ್ಲದೆ ಇರುವ ಇತರರಿಗೆ ಶಾಶ್ವತ ನಾಗರಿಕ ಸ್ಥಾನಮಾನ ನೀಡುವ ಪ್ರಕ್ರಿಯೆ ದಶಕಗಳಿಂದಲೂ ನಡೆಯುತ್ತಲೇ ಇದೆ. ಈ ವಿನಾಯಿತಿಯನ್ನು ವಜಾಗೊಳಿಸಲು ಟ್ರಂಪ್ ಆಡಳಿತ ಚಿಂತನೆ ನಡೆಸಿದೆ.
ಈ ಬೇಸಿಗೆಯ ನಂತರ ಇದು ಜಾರಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕ ನಾಗರಿಕ ಮತ್ತು ವಲಸೆ ಸೇವಾ ವಿಭಾಗದ ನಿರ್ದೇಶಕ ಫ್ರಾಂಸಿಸ್ ಕಿಸ್ನಾ ಹೇಳಿದ್ದಾರೆ. ಹೆಚ್ -4 ಅವಲಂಬಿತ ಪತಿ. ಪತ್ನಿಯರ ವೀಸಾ ರದ್ದುಗೊಳಿಸುವ ಪ್ರಸ್ತಾವ ಸೇರಿದಂತೆ ಹಲವು ಚಿಂತನೆಗಳಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚಿನ ವಲಸೆ ನೀತಿ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ 71 ಸಾವಿರಕ್ಕೂ ಹೆಚ್ಚು ಪತಿ, ಪತ್ನಿಯ ಹೆಚ್-1ಬಿ ವೀಸಾ ಹೊಂದಿದ್ದಾರೆ. ಈ ಪೈಕಿ ಶೇ.90 ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ.
2017 ರಿಂದಲೂ ಕೆಲಸ ಮಾಡುತ್ತಿರುವ ಹೆಚ್- 4 ಪತಿ , ಪತ್ನಿ ವೀಸಾದಾರರಲ್ಲಿ ಶೇ, 94 ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಇದರಲ್ಲಿ ಶೇ.93 ರಷ್ಟು ಭಾರತೀಯರೇ ಆಗಿದ್ದರೆ, ಉಳಿದವರು ಚೀನಾಕ್ಕೆ ಸೇರಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


