ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ಭಾರತ-ಚೀನಾ ಪರಸ್ಪರರ ಭಾಷೆ ಕಲಿಯಬೇಕು; ಸುಷ್ಮಾ ಸ್ವರಾಜ್
ಭಾರತ ಹಾಗೂ ಚೀನಾದ ಸಂಬಂಧ ವೃದ್ಧಿಗೆ ಉಭಯ ರಾಷ್ಟ್ರಗಳು ಪರಸ್ಪರರ ಭಾಷೆ ಕಲಿಯಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಹೇಳಿದ್ದಾರೆ...

Published On :
ಬೀಜಿಂಗ್: ಭಾರತ ಹಾಗೂ ಚೀನಾದ ಸಂಬಂಧ ವೃದ್ಧಿಗೆ ಉಭಯ ರಾಷ್ಟ್ರಗಳು ಪರಸ್ಪರರ ಭಾಷೆ ಕಲಿಯಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಹೇಳಿದ್ದಾರೆ.
ಭಾರತ ಮತ್ತು ಚೀನಾ ರಾಷ್ಟ್ರಗಳ ಸ್ನೇಹ ವೃದ್ಧಿಗೆ ಹಿಂದಿ ಭಾಷೆ ಕೊಡುಗೆ ಕುರಿತಂತೆ ಬೀಜಿಂಗ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಂವಹನದಿಂದ ಎದುರಾಗುವ ಅಡೆತಡೆಗಳಿಂದ ಹೊರಬರಲು ಉಭಯ ರಾಷ್ಟ್ರಗಳು ಪರಸ್ಪರರ ಭಾಷೆಗಳನ್ನು ಕಲಿಯುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇಂದು ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೊಳ್ಳುತ್ತಿರುವ ರೀತಿಯಲ್ಲಿಯೇ ಚೀನಾ ವಿದ್ಯಾರ್ಥಿಗಳು ಹಿಂದಿ ಭಾಷೆ ಕಲಿಯುವುದು ಹಾಗೂ ಭಾರತೀಯ ವಿದ್ಯಾರ್ಥಿಗಳು ಮ್ಯಾಂಡರಿನ್ ಕಲಿಯಬೇಕು. ಆಗ, ಭಾರತದಲ್ಲಿರುವವರು ಚೀನಾಗೆ ಹೋದರೂ, ಚೀನಾದವರು ಭಾರತಕ್ಕೆ ಬಂದಲೂ ನಮಗೆ ಭಾಷೆಯ ಅಡೆತಡೆಗಳು ಎದುರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಎರಡೂ ದೇಶದ ವಿದೇಶಾಂಗ ಸಚಿವರೂ ಕೂಡ ಉಭಯ ರಾಷ್ಟ್ರಗಳ ಸಂಬಂಧವನ್ನು ಗಟ್ಟಿಗೊಳಿಸಲು ಸಾಧ್ಯವಾಗದ್ದನ್ನು, ಹಿಂದಿ ಭಾಷೆ ಪ್ರೀತಿಸುವ ಚೀನಾ ವಿದ್ಯಾರ್ಥಿಗಳು ಮಾಡುತ್ತಾರೆಂದಿದ್ದಾರೆ.
ಇದೇ ವೇಳೆ ಭಾರತೀಯ ಚಿತ್ರರಂಗವನ್ನು ಪ್ರಶಂಸಿಸಿರುವ ಅವರು, ನೆರೆರಾಷ್ಟ್ರ ಚೀನಾದಲ್ಲಿ ಭಾರತೀಯ ಚಿತ್ರಗಳ ಬಿಡುಗಡೆ ಸಂಖ್ಯೆ ಹೆಚ್ಚಾಗುತ್ತಿವೆ ಚೀನಾದಲ್ಲಿ ಭಾರತೀಯ ಚಿತ್ರಗಳು ಹೆಸರು ಗಳಿಸುತ್ತಿವೆ. ನಿನ್ನೆಯಷ್ಟೇ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ದಂಗಲ್, ಸೀಕ್ರೆಟ್ ಸೂಪರ್ ಸ್ಟಾರ್ ಮತ್ತು ಹಿಂದಿ ಮೀಡಿಯಂ ಚಿತ್ರಗಳ ಬಗ್ಗೆ ಮಾತನಾಡಿದ್ದರು ಎಂದು ಹೇಳಿದ್ದಾರೆ.
ಬಳಿಕ ಚೀನಾದಲ್ಲಿ ಹಿಂದಿ ಕಲಿಯುತ್ತಿರುವ 25 ವಿದ್ಯಾರ್ಥಿಗಳಿಗೆ ಭಾರತ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ.
ಈಗಷ್ಟೇ ಯುವತಿಯೊಬ್ಬಳು ನನ್ನೊಂದಿಗೆ ಮಾತನಾಡುತ್ತಾ, ಭಾರತಕ್ಕೆ ಭೇಟಿ ನೀಡುವುದು ನನ್ನ ಕನಸು ಎಂದು ಹೇಳಿದ್ದರು. ಆಕೆಯ ಕನಸು ಎಂದಿಗೆ ನನಸಾಗುವುದೋ ಆಕೆಗೆ ಗೊತ್ತಿಲ್ಲ. ನಿಮ್ಮ ಕನಸು ಶೀಘ್ರದಲ್ಲಿಯೇ ನನಸಾಗುವುದು. ಚೀನಾದಲ್ಲಿ ಹಿಂದಿ ಕಲಿಯುತ್ತಿರುವ 25 ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಈಗಷ್ಟೇ ಭಾರತೀಯ ರಾಯಭಾರಿ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿದ್ದೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


