ಶಿಲಾಯುಗದ ಹಸುವಿನಲ್ಲಿ ತಲೆಬುರುಡೆಯ ಶಸ್ತ್ರಚಿಕಿತ್ಸೆ ಗುರುತು ಪತ್ತೆ: ಅಧ್ಯಯನ ವರದಿ
ಶಿಲಾಯುಗದ ಹಸುವಿನಲ್ಲಿ ತಲೆಬುರುಡೆಯ ಶಸ್ತ್ರಚಿಕಿತ್ಸೆ ನಡೆದಿರುವ ಗುರುತು ಪತ್ತೆಯಾಗಿದೆ ಎಂದು ಅಧ್ಯಯನ ವರದಿಯೊಂದರ ಮೂಲಕ ತಿಳಿದುಬಂದಿದೆ.

Published On :
ಪ್ಯಾರಿಸ್: ಶಿಲಾಯುಗದ ಹಸುವಿನಲ್ಲಿ ತಲೆಬುರುಡೆಯ ಶಸ್ತ್ರಚಿಕಿತ್ಸೆ ನಡೆದಿರುವ ಗುರುತು ಪತ್ತೆಯಾಗಿದೆ ಎಂದು ಅಧ್ಯಯನ ವರದಿಯೊಂದರ ಮೂಲಕ ತಿಳಿದುಬಂದಿದೆ.
ಇದೇ ಮೊದಲ ಬಾರಿಗೆ ಇಂತಹದ್ದೊಂದು ವಿಷಯ ಬಹಿರಂಗವಾಗಿದ್ದು, ನಿಯೋಲಿಥಿಕ್ ಸೈಟ್ ನಲ್ಲಿ ಪತ್ತೆಯಾಗಿರುವ ಹಸುವಿನ ತಲೆಬುರುಡೆ ಅಂದಾಜು ಕ್ರಿ.ಪೂ 3,400 ರಿಂದ 3,000 ನಷ್ಟು ಹಳೆಯದು ಎಂದು ಸೈಂಟಿಫಿಕ್ ರಿಪೋರ್ಟ್ಸ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಹೇಳಲಾಗಿದೆ.
ಹಸುವಿನ ತಲೆಬುರುಡೆ ಪತ್ತೆಯಾಗಿರುವ ಪ್ರದೇಶ ಹಿಂದೊಮ್ಮೆ ವಾಣಿಜ್ಯ ಕೇಂದ್ರವಾಗಿತ್ತು, ಈ ಪ್ರದೇಶದಲ್ಲಿ ಹಸು, ಹಂದಿ, ಕುರಿ, ಮೇಕೆ ಮುಂತಾದ ಪ್ರಾಣಿಗಳ ಮೂಳೆಗಳೂ ಪತ್ತೆಯಾಗಿವೆ. ನವಶಿಲಾಯುಗದ ತಾಣಗಳಲ್ಲಿ ಹಸುಗಳ ಪಳೆಯುಳಿಕೆಗಳು ಸಾಮಾನ್ಯವಾಗಿದ್ದರೂ ಸಂಪೂರ್ಣ ತಲೆಬುರುಡೆಗಳು ಇಲ್ಲಿಯವೆರೆಗೂ ಸಿಕ್ಕಿರಲಿಲ್ಲ.
ಈಗ ಸಿಕ್ಕಿರುವ ತಲೆಬುರುಡೆಯ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ಪ್ರಾಥಮಿಕ ಅಧ್ಯಯನದ ಪ್ರಕಾರ ಮೂಳೆ ಅಂಗಾಂಶಗಳಲ್ಲಿ ಉಂಟಾಗಿದ್ದ ಗಾಯ ವಾಸಿಯಾಗಿರಲಿಲ್ಲ ಅಥವಾ ಶಸ್ತ್ರಚಿಕಿತ್ಸೆಯ ನಂತರ ಆ ಹಸು ಮೃತಪಟ್ಟಿರಬಹುದು ಹೇಳಲಾಗುತ್ತಿದೆ.
ತಲೆಬುರುಡೆಯ ಭಾಗದಲ್ಲಿ ಉದ್ದೇಶ ಪೂರ್ವಕವಾಗಿ ರಂಧ್ರ ಕೊರೆಯಲಾಗಿದ್ದು, ಇದರಿಂದಾಗಿ ಮೂಳೆ ಹಾನಿಗೊಳಗಾಗಿದೆ. ಇದೇ ಮಾದರಿಯಲ್ಲಿ ಹಿಂದೊಮ್ಮೆ ನವಶಿಲಾಯುಗದ ಪ್ರದೇಶದಲ್ಲಿ ತಲೆಬುರುಡೆ ಇದೇ ಸ್ಥಿತಿಯಲ್ಲಿ ಪತ್ತೆಯಾಗಿತ್ತಾದರೂ ಯಾವ ಕಾಲದ್ದು ಎಂದು ಸ್ಪಷ್ಟವಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


