ವಿದೇಶ

ವಿಶ್ವಸಂಸ್ಥೆಯ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್‌ನ 6 ಚುನಾವಣೆಗಳಲ್ಲಿ ಭಾರತ ಗೆಲುವು, ಅದ್ಭುತ ಸಾಧನೆ

ವಿಶ್ವಸಂಸ್ಥೆಯ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್‌ನ ಆರು ಚುನಾವಣೆಗಳಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದ್ದು ಆ ಪೈಕಿ ಐದರಲ್ಲಿ ಸರ್ವಾನುಮತದಿಂದ ಗೆಲುವು ಸಾಧಿಸಿದೆ.

ವಿಶ್ವಸಂಸ್ಥೆಯ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್‌ನ 6 ಚುನಾವಣೆಗಳಲ್ಲಿ ಭಾರತ ಗೆಲುವು, ಅದ್ಭುತ ಸಾಧನೆ
ಭಾರತ ಧ್ವಜ
Published On :
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್‌ನ ಆರು ಚುನಾವಣೆಗಳಲ್ಲಿ ಭಾರತ ಗೆಲುವು ಸಾಧಿಸಿದ್ದು ಆ ಪೈಕಿ ಐದರಲ್ಲಿ ಸರ್ವಾನುಮತದಿಂದ ಗೆಲುವು ಸಾಧಿಸಿದೆ. 
ಇತ್ತೀಚಿನ ದಿನಗಳಲ್ಲಿ ಇದು ಭಾರತದ ಪಾಲಿನ ಅತಿ ಮುಖ್ಯ ಗೆಲುವು ಎಂದು ಹೇಳಬಹುದು. ಇನ್ನು ಈ ಗೆಲುವಿನ ಮೂಲಕ ಭಾರತ ವಿಶ್ವಸಂಸ್ಥೆಯ ನಾಲ್ಕು ಕಾರ್ಯನಿರ್ವಾಹಕ ಮಂಡಳಿ ಹಾಗೂ ಮೂರು ಆಯೋಗಗಳು ಮತ್ತು ಸಮಿತಿಯಲ್ಲಿ ಸ್ಥಾನ ಪಡೆಯಲಿದೆ. 
ಏಷ್ಯಾ-ಪೆಸಿಫಿಕ್ ಗುಂಪಿನೊಳಗೆ ಭಾರತವು ಕೇವಲ ಸರ್ಕಾರೇತರ ಸಂಸ್ಥೆಗಳ(ಎನ್ಜಿಒ) ಸಮಿತಿಗೆ ಮಾತ್ರ ಚುನಾವಣೆ ಎದುರಿಸಿದ್ದು ಅದರಲ್ಲಿ ಅತ್ಯಧಿಕ 46 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದೆ. ಇನ್ನು ಪಾಕಿಸ್ತಾನ 43 ಮತ್ತು ಚೀನಾ 39 ಮತಗಳನ್ನು ಪಡೆದಿದೆ. 
ವಿಶ್ವಸಂಸ್ಥೆ 193 ಸದಸ್ಯರನ್ನು ಒಳಗೊಂಡಿದೆ. ಆರು ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಯುನೈಟೆಡ್ ನೇಷನ್ಸ್‍ನ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್‌ಗೆ ಪ್ರವೇಶಿಸಿದೆ. 
2019 ಜನವರಿಯಿಂದ ಸಮಿತಿ ಆರಂಭಗೊಳ್ಳಲಿದ್ದು ಭಾರತ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲಿದೆ. ಯುಎನ್ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ), ವಿಶ್ವಸಂಸ್ಥೆ ಪಾಪ್ಯುಲೇಶನ್ ಫಂಡ್ (ಯುಎನ್ಎಫ್ಪಿಎ) ಮತ್ತು ವಿಶ್ವಸಂಸ್ಥೆ ಆಫೀಸ್ ಫಾರ್ ಪ್ರಾಜೆಕ್ಟ್ ಸರ್ವಿಸಸ್ (ಯುಎನ್ಒಪಿಎಸ್) ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.