ಭಾರತದಲ್ಲಿ ಚುನಾವಣಾ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧ: ಮಾರ್ಕ್ ಜುಕರ್ಬರ್ಗ್
2019ರಲ್ಲಿ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಹೇಳಿದ್ದಾರೆ.

Published On :
ವಾಷಿಂಗ್ಟನ್: 2019ರಲ್ಲಿ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಹೇಳಿದ್ದಾರೆ.
ಫೇಸ್ಬುಕ್ ಬಳಕೆದಾರರ ದತ್ತಾಂಶ ಬಳಸಿಕೊಂಡು ಅಮೆರಿಕದ ಅಧ್ಯಕ್ಷೀಯ ಚುನಾವಣೆ(2016)ಯಲ್ಲಿ ಟ್ರಂಪ್ ಪರ ಕೆಲಸ ಮಾಡಿದ ಆರೋಪವನ್ನು ಫೇಸ್ಬುಕ್ ಕಾರ್ಯವ್ಯಾಪ್ತಿಯಲ್ಲಿ ಬರುವ ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ಸಂಸ್ಥೆ ಎದುರಿಸುತ್ತಿದೆ. ಈ ಸಂಬಂಧ ಅಮರಿಕದ ಸೆನೆಟ್ನ ನ್ಯಾಯಾಂಗ ಮತ್ತು ವಾಣಿಜ್ಯ ಸಮಿತಿಗಳ ಮುಂದೆ ಮಂಗಳವಾರ ನಡೆದ ವಿಚಾರಣೆಗೆ ಜುಕರ್ಬರ್ಗ್ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಜುಕರ್ ಬರ್ಗ್, 'ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಮಹತ್ವ ತಿಳಿದಿದೆ, ಈ ಹಿನ್ನೆಲೆಯಲ್ಲಿ ಚುನಾವಣಾ ಸಮಗ್ರತೆಯನ್ನು ಕಾಪಾಡಲು ಫೇಸ್ಬುಕ್ ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಈ ವರ್ಷ ಮತ್ತು ಮುಂದಿನ ವರ್ಷ ಭಾರತ ಸೇರಿದಂತೆ ಹಂಗೇರಿ, ಪಾಕಿಸ್ತಾನ, ಮೆಕ್ಸಿಕೋ ಮತ್ತು ಬ್ರೆಜಿಲ್ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೇಸ್ಬುಕ್ನಿಂದ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಈಗಾಗಲೇ ಫೇಸ್ಬುಕ್ ನಕಲಿ ಖಾತೆಗಳನ್ನು ಗುರುತಿಸಲು ಆರ್ಟಿಫೀಷಿಯಲ್ ಇಂಟಲಿಜೆನ್ಸ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ. 2016ರಲ್ಲಿ ಇದ್ದ ಸುರಕ್ಷತಾ ವ್ಯವಸ್ಥೆಗಿಂತಲೂ ಹೆಚ್ಚಿನ ಸುರಕ್ಷತೆಯನ್ನು ಈಗ ನೀಡಲಾಗುತ್ತಿದೆ. ಫೇಸ್ಬುಕ್ ಸಂಸ್ಥೆಯನ್ನು ನಾನೇ ಸ್ಥಾಪಿಸಿದ್ದು, ಹಾಗಾಗಿ ಅಲ್ಲಿ ನಡೆಯುವ ಪ್ರತಿಯೊಂದು ವಿಷಯಗಳಿಗೂ ನಾನೇ ಜವಾಬ್ದಾರನಾಗಿರುತ್ತೇನೆ. ದತ್ತಾಂಶ ದುರ್ಬಳಕೆ ನನ್ನ ತಪ್ಪು, ಹಾಗಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಜುಕರ್ಬರ್ಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಫೇಸ್ ಬುಕ್Mark ZuckerbergWashingtonವಾಷಿಂಗ್ಟನ್ಮಾರ್ಕ್ ಜುಕರ್ ಬರ್ಗ್2019 ಲೋಕಸಭಾ ಚುನಾವಣೆFacebook Data Breach2019 Parliment Election
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


