ಜರ್ಮನಿ: ಪಾದಾಚಾರಿ ಮಾರ್ಗಕ್ಕೆ ನುಗ್ಗಿದ ಕಾರು ಮೂವರ ಸಾವು, 20 ಜನರಿಗೆ ಗಾಯ
ವಾಹನವೊಂದು ಪಾದಾಚಾರಿ ಮಾರ್ಗಕ್ಕೆ ನುಗ್ಗಿದ ಪರಿಣಾಮ ಕನಿಷ್ಟ 3 ಜನ ಸಾವನ್ನಪ್ಪಿದ್ದು 20 ಮಂದಿ ಗಾಯಗೊಂಡಿರುವ ಘಟನೆ ಜರ್ಮನಿಯ ಮಂಸ್ಟರ್ ನಲ್ಲಿ ನಡೆದಿದೆ.

Published On :
ಬರ್ಲಿನ್(ಜರ್ಮನಿ): ವಾಹನವೊಂದು ಪಾದಾಚಾರಿ ಮಾರ್ಗಕ್ಕೆ ನುಗ್ಗಿದ ಪರಿಣಾಮ ಕನಿಷ್ಟ 3 ಜನ ಸಾವನ್ನಪ್ಪಿದ್ದು 20 ಮಂದಿ ಗಾಯಗೊಂಡಿರುವ ಘಟನೆ ಜರ್ಮನಿಯ ಮಂಸ್ಟರ್ ನಲ್ಲಿ ನಡೆದಿದೆ.
ಮಂಸ್ಟರ್ ನಗರದ ಪಶ್ಚಿಮ ಭಾಗದಲ್ಲಿ ಕಾರ್ ಒಂದು ಪಾದಚಾರಿ ಮಾರ್ಗಕ್ಕೆ ನುಗ್ಗಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 3 ಜನರು ಸಾವನ್ನಪ್ಪಿದ್ದು ಇದರಲ್ಲಿ ಅಪಘಾತ ನಡೆಸಿದ ಕಾರು ಚಾಲಕನೂ ಸೇರಿದ್ದಾನೆಂದು ಜರ್ಮನಿಯ ಆಂತರಿಕ ಸಚಿವಾಲಯ ಹೇಳಿದೆ.ಅಪಘಾತ ನಡೆಸಿದ ಬಳಿಕ ಚಾಲಕನು ತಾನು ಸ್ವತಃ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದನೆಂದು ಸ್ಥಳೀಯ ಪೋಲೀಸರು ಈ ಮುನ್ನ ಮಾಹಿತಿ ನೀಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಜರ್ಮನಿಯು ಹಲವಾರು ಭಯೋತ್ಪಾದಕ ದಾಳಿಯನ್ನು ಕಂಡಿದ್ದು ಇದೂ ಸಹ ಭಯೋತ್ಪಾದಕ ದಾಳಿ ಎಂದು ಪೋಲೀಸರು ಊಹೆಮಾಡಿದ್ದರೂ ಇದರ ಕುರಿತಂತೆ ಅಧಿಕೃತ ದೃಢೀಕರಣವನ್ನು ನೀಡಲಿಲ್ಲ.
ಅಪಘಾತ ನಡೆದ ಸ್ಥಳದಲ್ಲಿ ಹಲವಾರು ಪೋಲೀಸ್ ಮತ್ತು ಅಗ್ನಿಶಾಮಕ ವಾಹನಗಳು ಗುಂಪು ಸೇರಿರುವ ಚಿತ್ರಗಳು ಸ್ಥಳೀಯ ದೂರದರ್ಶನದಲ್ಲಿ ಪ್ರಸಾರವಾಗಿದೆ. ಶಸ್ತ್ರಸಜ್ಜಿತ ಪೋಲಿಸರು ಸ್ಥಳವನ್ನು ಸುತ್ತುವರಿದಿದ್ದು ತನಿಖೆಗೆ ಅನುಕೂಲವಾಗಲು ನಗರದ ಕೇಂದ್ರದಿಂದ ದೂರ ತೆರಳುವಂತೆ ಸ್ಥಳೀಯರನ್ನು ಮನವಿ ಮಾಡಿದ್ದಾರೆ.
ಇದೇ ವೇಳೆ ಘತನೆ ಸಂಬಂಧ ಊಹಾಪೋಹಗಳನ್ನು ಹರಡದಂತೆ ಪೋಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


