ಪಾಕ್ ವಿದೇಶಾಂಗ ಸಚಿವರ ವಿರದ್ಧ ರೂ.10 ಕೋಟಿ ಮಾನನಷ್ಟ ಮೊಕದ್ದೆ ಹಾಕಿದ ಹಫೀಜ್ ಸಯೀದ್
'ಅಮೆರಿಕದ ಪ್ರಿಯ ವ್ಯಕ್ತಿ' ಎಂದು ಕರೆದ ಪಾಕಿಸ್ತಾನ ವಿದೇಶಾ ಸಚಿವ ಖವಾಜಾ ಆಫಿಸ್ ವಿರುದ್ಧ ಮುಂಬೈ ಉಗ್ರರ ದಾಳಿ ಪ್ರಕರಣದ ಪ್ರಮುಖ ರುವಾರಿ ಹಫೀಜ್ ಸಯೀದ್ ರೂ.10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ನಿರ್ಧರಿಸಿದ್ದಾರೆಂದು...

Published On :
ಲಾಹೋರ್: 'ಅಮೆರಿಕದ ಪ್ರಿಯ ವ್ಯಕ್ತಿ' ಎಂದು ಕರೆದ ಪಾಕಿಸ್ತಾನ ವಿದೇಶಾ ಸಚಿವ ಖವಾಜಾ ಆಫಿಸ್ ವಿರುದ್ಧ ಮುಂಬೈ ಉಗ್ರರ ದಾಳಿ ಪ್ರಕರಣದ ಪ್ರಮುಖ ರುವಾರಿ ಹಫೀಜ್ ಸಯೀದ್ ರೂ.10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ನಿರ್ಧರಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸುವ ಅಮೆರಿಕಕ್ಕೆ, 20-30 ವರ್ಷಗಳ ಹಿಂದೆ ಇದೇ ಭಯೋತ್ಪಾದಕರು ಪ್ರಿಯರಾಗಿದ್ದರು ಎಂಬ ಅರ್ಥದಲ್ಲಿ ಈ ಹಿಂದೆ ಆಸೀಫ್ ಅವರು ಹೇಳಿದ್ದರು.
ಆಸೀಫ್ ಅವರ ಈ ಹೇಳಿಕೆ ಉಗ್ರ ಹಫೀಜ್ ಸಯೀದ್ ತೀವ್ರ ಕೆಂಡಾಮಂಡಲಗೊಂಡಿದ್ದು, ಸಯೀದ್ ಪರ ವಕೀಲ ಎ.ಕೆ. ಡೋಗರ್ ಅವರು ಪಾಕಿಸ್ತಾನ ವಿದೇಶಾಂಗ ಸಚಿವರ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
ಹಫೀಜ್ ಸಯೀದ್ ವಿರುದ್ಧ ನಮ್ಮ ದೇಶದ ವಿದೇಶಾಂಗ ಸಚಿವರು ಮಾತನಾಡಿರುವುದನ್ನು ಕೇಳಿ ಬಹಳ ಆಘಾತವಾಯಿತು. ವಿದೇಶಾಂಗ ಸಚಿವರ ನಿಂದನಾತ್ಮಕ ಭಾಷೆಯನ್ನು ಬಳಕೆ ಮಾಡಿದ್ದಾರೆ. ಹಫೀಜ್ ಪ್ರವಾದಿಗಳ ಆಜ್ಞೆಗಳನ್ನು ಅನುಸರಿಸುವ ದೇಶಭಕ್ತಿಯುಳ್ಳ ಇಸ್ಲಾಮ ಧರ್ಮದ ಪ್ರೀತಿಯುತ ಮುಸ್ಲಿಂ ವ್ಯಕ್ತಿಯಾಗಿದ್ದಾರೆ. ಆಸೀಫ್ ಅವರ ಹೇಳಿಕೆಯಿಂದ ಮಾನನಷ್ಟವಾಗಿದ್ದು, ಪಾಕಿಸ್ತಾನ ದಂಡ ಸಂಹಿತೆ 500ರ ಅಡಿಯಲ್ಲಿ ಸಚಿಚವರಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬೇಕು ಎಂದು ಡೋಗರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
terroristಉಗ್ರHafiz Saeedಹಫೀಜ್ ಸಯೀದ್ಪಾಕಿಸ್ತಾನ ವಿದೇಶಾಂಗ ಸಚಿವಮಾನನಷ್ಟ ಮೊಕದ್ದಮೆDefamation CasePakistan Foreign Minister
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


