ವಿದೇಶ

ರದ್ದುಗೊಂಡ ಹಳೆಯ ನೋಟುಗಳ ಬದಲಾವಣೆಗೆ ಎನ್ಆರ್ ಐ ಗಳಿಗಿಲ್ಲ ಮತ್ತೊಂದು ಚಾನ್ಸ್: ಸುಷ್ಮಾ ಸ್ವರಾಜ್

2016 ರ ನವೆಂಬರ್ 8 ರಂದು ರದ್ದುಗೊಂಡಿದ್ದ 500, 1000 ರೂ ಮುಖಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಲು ಅನಿವಾಸಿ ಭಾರತೀಯರಿಗೆ ಅಥವಾ ವಿದೇಶದಲ್ಲಿರುವ...

ರದ್ದುಗೊಂಡ ಹಳೆಯ ನೋಟುಗಳ ಬದಲಾವಣೆಗೆ ಎನ್ಆರ್ ಐ ಗಳಿಗಿಲ್ಲ ಮತ್ತೊಂದು ಚಾನ್ಸ್: ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
Published On :
ವಾಷಿಂಗ್ ಟನ್: 2016 ರ ನವೆಂಬರ್ 8 ರಂದು ರದ್ದುಗೊಂಡಿದ್ದ 500, 1000 ರೂ ಮುಖಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಲು ಅನಿವಾಸಿ ಭಾರತೀಯರಿಗೆ ಅಥವಾ ವಿದೇಶದಲ್ಲಿರುವ ಭಾರತೀಯ ಮೂಲದ ವ್ಯಕ್ತಿಗಳಿಗೆ ಮತ್ತೊಂದು ಅವಕಾಶ ನೀಡುವುದಿಲ್ಲ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 
ಗ್ಲೋಬಲ್ ಆರ್ಗನೈಸೇಷನ್ ಫಾರ್ ಪೀಪಲ್ ಆಫ್ ಇಂಡಿಯನ್ ಒರಿಜಿನ್(ಜಿಒಪಿಐಒ)  ನೊಂದಿಗೆ ಮಾತನಾಡಿದ್ದ ವೇಳೆ ಸುಷ್ಮಾ ಸ್ವರಾಜ್ ಈ ಹೇಳಿಕೆ ನೀಡಿದ್ದಾರೆ. ಎನ್ಆರ್ಐ ಗಳಿಗೆ ಹಳೆಯ ನಿಷೇಧಿತ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಲು ಸಾಕಷ್ಟು ಅವಕಾಶ ನೀಡಲಾಗಿತ್ತು. ಸರ್ಕಾರ ಎನ್ಆರ್ ಐ ಗಳಿಗೆ ಮತ್ತೊಮ್ಮೆ ಅಂತಹ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಸುಷ್ಮಾ ಸ್ವರಾಜ್ ಜಿಒಪಿಐಒ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.