ಜಪಾನ್ ಪ್ರಧಾನಿ ಶಿಂಜೊ ಆಬೆ ಅವರಿಂದ ಸಂಸತ್ತು ಕೆಳಮನೆ ವಿಸರ್ಜನೆ, ಮುಂದಿನ ತಿಂಗಳು ಮತ್ತೆ ಚುನಾವಣೆ
ಜಪಾನ್ ಪ್ರಧಾನಿ ಶಿಂಜೋ ಅಬೆ ದೇಶದ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿದ್ದಾರೆ.

Published On :
ಟೋಕಿಯೋ : ಜಪಾನ್ ಪ್ರಧಾನಿ ಶಿಂಜೋ ಅಬೆ ದೇಶದ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿದ್ದಾರೆ.
ಸಂಸತ್ತು ಕೆಳಮನೆಯ ವಿಸರ್ಜನೆಯಿಂದ ಮತ್ತೆ ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆ ಆಗಬೇಕಿದೆ. ಮುಂದಿನ ಅ.22ರಂದು ಈ ಚುನಾವಣೆ ನಡೆಯಲಿದೆ.
ಸಂಸತ್ತಿನ ಸಭಾಧ್ಯಕ್ಷರಾಗಿರುವ ತದಮೋರಿ ಒಶಿಮಾ ಕೆಳಮನೆ ವಿಸರ್ಜನೆ ಕುರಿತಂತೆ ಪ್ರಧಾನಿ ಹೇಳಿಕೆಯನ್ನು ಸಂಸತ್ತಿನಲ್ಲಿ ಓದಿ ಹೇಳಿದರು.
ಶಿಂಜೋ ಅಬೆ, ಲಿಬರಲ್ ಡೆಮೋಕ್ರಾಟಿಕ್ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳುವ ಮೂಲಕ ಮುಂದಿನ ವರ್ಷ ಮುಗಿಯಲಿರುವ ತಮ್ಮ ಪ್ರಧಾನಿ ಅಧಿಕಾರ ಅವಧಿಯನ್ನು ಮತ್ತೆ ವಿಸ್ತರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದೇ ಕಾರಣದಿಂದ ಈಗ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿದ್ದಾರೆ ಎನ್ನಲಾಗಿದೆ.
ಜಪಾನಿನ ಉಭಯ ಸದನಗಳ ಸಂಸತ್ತಿಗೆ ಇನ್ನೂ ಒಂದು ವರ್ಷ ಅವಧಿ ಬಾಕಿ ಇರುವಾಗಲೇ ಪ್ರಧಾನಿ ಅಬೆ ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಳಮನೆಯನ್ನು ವಿಸರ್ಜಿಸಿರುವುದು ಪ್ರಧಾನಿಯ ಆತ್ಮವಿಶ್ವಾಸದ ಕುರುಹು ಎನ್ನಲಾಗಿದೆ
ಟೋಕಿಯೋ ರಾಜ್ಯಪಾಲ ಯುರಿಕೋ ಕೊಯಿಕೆ ಈ ವಾರ ಹೊಸ ಪಕ್ಷವೊಂದನ್ನು ಪ್ರಾರಂಭಿಸಲಿದ್ದು ಇದು ಆಳುವ ಪಕ್ಷಕ್ಕೆ ಹೊಸ ಸವಾಲಾಗಿದೆ.
ಯುರಿಕೋ ಅವರ "ಪಾರ್ಟಿ ಆಫ್ ಹೋಪ್' ಕೆಲವು ಮತದಾರರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ ಜತೆಗೆ ವಿರೋಧ ಪಕ್ಷದಲ್ಲಿನ ಬಂಡಾಯ ಎದ್ದ ಸಂಸದರ, ಶಾಸಕರು ಸಹ ಈ ಹೊಸ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Japanಜಪಾನ್ಟೋಕಿಯೋTokyoJapanese Prime Minister Shinzo Abenational electiondissolved parliamentಜಪಾನ್ ಪ್ರಧಾನಿ ಶಿಂಜೊ ಅಬೆರಾಷ್ಟ್ರೀಯ ಚುನಾವಣೆಸಂಸತ್ತು ವಿಸರ್ಜನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


