ನರಭಕ್ಷಕರು: ಸರಿಸುಮಾರು 30ಕ್ಕೂ ಹೆಚ್ಚು ಮನುಷ್ಯರನ್ನು ಕೊಂದು ತಿಂದ ದಂಪತಿ
ರಷ್ಯಾದ ಕ್ರಾಸ್ ನೊಡರ್ ನಲ್ಲಿ ನರಭಕ್ಷಕ ದಂಪತಿಗಳಿಬ್ಬರು ಈವರೆಗೆ 30 ಮಂದಿಯನ್ನು ಕೊಂದು ಅವರ ಶವಗಳನ್ನು ತಿಂದಿದ್ದು ಇದೀಗ ಪೊಲೀಸರ...

Published On :
ಮಾಸ್ಕೋ: ರಷ್ಯಾದ ಕ್ರಾಸ್ ನೊಡರ್ ನಲ್ಲಿ ನರಭಕ್ಷಕ ದಂಪತಿಗಳಿಬ್ಬರು ಈವರೆಗೆ 30 ಮಂದಿಯನ್ನು ಕೊಂದು ಅವರ ಶವಗಳನ್ನು ತಿಂದಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
35 ವರ್ಷದ ಪತಿ ದಿಮಿತ್ರಿ ಬಕ್ಷಿವ್ ಹಾಗೂ 42 ವರ್ಷದ ಪತ್ನಿ ನಟಾಲಿ ಅವರು 1999ರಿಂದ ನರಮಾಂಸ ತಿನ್ನ ತೊಡಗಿದ್ದಾರೆ. ಇವರಿಬ್ಬರು ತಮಗೆ ಬೇಕಾದಾಗ ಕೈಗೆ ಸಿಕ್ಕ ಮನುಷ್ಯನನ್ನು ಕೊಂದು ಅವರ ಶವಗಳನ್ನು ತಿಂದಿದ್ದಾರೆ.
ಕಟ್ಟಡ ಕಾರ್ಮಿಕನಾಗಿದ್ದ ದಿಮಿತ್ರಿ ಒಂದು ದಿನ ಸ್ಥಳದಲ್ಲಿ ತನ್ನ ಮೊಬೈಲ್ ಫೋನ್ ನನ್ನು ಮರೆತು ಹೋಗಿದ್ದಾನೆ. ಈ ಫೋನ್ ಅನ್ನು ತೆಗೆದುಕೊಂಡ ಮತ್ತೋರ್ವ ಕಾರ್ಮಿಕನೊಬ್ಬ ಆಕಸ್ಮಾತ್ ಆಗಿ ಫೋನ್ ನಲ್ಲಿನ ಫೋಟೋಗಳನ್ನು ಗಮನಿಸಿದ್ದು ದಿಗ್ಬ್ರಾಂತರಾಗಿದ್ದಾರೆ.
ಮನುಷ್ಯನ ಮಾಂಸ ಇರುವ ಫೋಟೋಗಳು ಹಾಗೂ ದಿಮಿತ್ರಿ ಮನುಷ್ಯನ ಮಾಂಸ ತಿನ್ನುತ್ತಾ ಕ್ಲಿಕ್ಕಿಸಿಕೊಂಡ ಫೋಟೋಗಳು ಕಂಡು ಬೆದರಿ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ತಕ್ಷಣ ದಿಮಿತ್ರಿ ನಿವಾಸದ ಮೇಲೆ ದಾಳಿ ಮಾಡಿ ಪೊಲೀಸರಿಗೆ ಆತನ ಮನೆಯಲ್ಲಿ ಮನುಷ್ಯರ ಮೃತ ದೇಹದ ಭಾಗಗಳು, ಸಂಗ್ರಹಿಸಿಟ್ಟ ಮನುಷ್ಯರ ಮಾಂಸ ಕಂಡಿವೆ. ಕೂಡಲೇ ದಂಪತಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


