ಫ್ಲೋರಿಡಾ: ಇರ್ಮಾ ಚಂಡಮಾರುತಕ್ಕೆ 2 ಕಡೆ ಭೂ ಕುಸಿತ, 5.6 ಮಿಲಿಯನ್ ಜನರ ಸ್ಥಳಾಂತರ!
ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದ್ದ ವಿನಾಶಕಾರಿ ಚಂಡಮಾರುತ ಇರ್ಮಾ, ಇದೀಗ ಫ್ಲೋರಿಡಾದಿಂದ ಪಶ್ಚಿಮ ಕರಾವಳಿಯತ್ತ ಮುಖಮಾಡಿದೆ.

Published On :
ಫ್ಲೋರಿಡಾ: ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದ್ದ ವಿನಾಶಕಾರಿ ಚಂಡಮಾರುತ ಇರ್ಮಾ, ಇದೀಗ ಫ್ಲೋರಿಡಾದಿಂದ ಪಶ್ಚಿಮ ಕರಾವಳಿಯತ್ತ ಮುಖಮಾಡಿದೆ.
ಸುಮಾರು 130 ಮೈಲುಗಳ ವೇಗದಲ್ಲಿ ಇರ್ಮಾ ಚಂಡಮಾರುತ ಬೀಸುತ್ತಿದ್ದು, ಚಂಡಮಾರುತದ ರಭಸಕ್ಕೆ ಫ್ಲೋರಿಡಾದಲ್ಲಿ ಎರಡು ಅವಳಿ ಭೂಕುಸಿತ ಸಂಭವಿಸಿದೆ. ಪರಿಣಾಮ ಫ್ಲೋರಿಡಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಇರ್ಮಾ ಚಂಡಮಾರುತ ಪಶ್ಚಿಮ ಕರಾವಳಿಯತ್ತ ಮುಖ ಮಾಡಿದ್ದು, ಈಗಾಗಲೇ ಪಶ್ಚಿಮ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಹಾಗೂ ಬಿರುಗಾಳಿ ಬೀಸುತ್ತಿದೆ.
ಇನ್ನು ಚಂಡಮಾರುತ ಸಂಬಂಧ ಈಗಾಗಲೇ ಫ್ಲೋರಿಡಾದಲ್ಲಿ ಸುಮಾರು 5.2 ಮಿಲಿಯನ್ ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಫ್ಲೋರಿಡಾದ ಸುಮಾರು 5 ಲಕ್ಷ ಮನೆಗಳಲ್ಲಿ ವಿದ್ಯುತ್ ಕಡಿತವಾಗಿದೆ. ಇಂದು ಸಂಜೆ 5 ಗಂಟೆ ವೇಳೆಗೆ ಇರ್ಮಾ ಚಂಡಮಾರುತ ಮ್ಯಾಕ್ರೋ ದ್ವೀಪ ಪ್ರವೇಶ ಮಾಡುವ ಸಾಧ್ಯತೆ ಇದೆ. ಇರ್ಮಾ ಚಂಡಮಾರುತ ಅಪ್ಪಳಿಸುವ ಭೀತಿಯಿಂದ ಈ ಹಿಂದೆ ಮಿಯಾಮಿ ಪ್ರಾಂತ್ಯದಿಂದ ಲಕ್ಷಾಂತರ ಜನರು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರವು ಮಾಡಲಾಗಿದೆ. ಆದಾಗ್ಯೂ ಸಾವು-ನೋವಿನ ವರದಿಗಳಾಗಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೆರಿಬಿಯನ್ ದ್ವೀಪದಲ್ಲಿ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ವಿನಾಶಕಾರಿ ಇರ್ಮಾ ಚಂಡಮಾರುತ ಇದೀಗ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದ್ದು, ಕೆಟಗರಿ-4 ಪ್ರಬಲತೆಯೊಂದಿಗೆ ಫ್ಲೋರಿಡಾವನ್ನು ಅಪ್ಪಳಿಸಿದೆ. ಚಂಡಮಾರುತಗಳ ವೇಗಕ್ಕೆ ಅನುಗುಣವಾಗಿ ಅವುಗಳಿಗೆ ಶ್ರೇಣಿ ನೀಡಲಾಗುತ್ತದೆ. ಅದರಂತೆ ಪ್ರಸ್ತುತ ಫ್ಲೋರಿಡಾಗೆ ಅಪ್ಪಳಿಸಿರುವ ಇರ್ಮಾ ಚಂಡಮಾರುತ 4ನೇ ಶ್ರೇಣಿಗೆ ಸೇರಿದ ವೇಗದೊಂದಿಗೆ ಫ್ಲೋರಿಡಾಗೆ ಅಪ್ಪಳಿಸಿದೆ ಎಂದು ಹವಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆರಿಬಿಯನ್ ದ್ವೀಪದಿಂದ ಗರಿಷ್ಠ ಸಾಮರ್ಥ್ಯದ ವೇಗದೊಂದಿಗೆ ಅಂದರೆ 5ನೇ ಶ್ರೇಣಿಯ ಸಾಮರ್ಥ್ಯದ ವೇಗದಲ್ಲಿ ಕ್ಯೂಬಾದ ಕ್ಯಾಮಾಗ್ಯುಯೆ ಪ್ರದೇಶದ ಮೇಲೆ ಅಪ್ಪಳಿಸಿದ್ದ ಚಂಡಮಾರುತ ಅಲ್ಲಿ ಭಾರೀ ಮಳೆ ಸುರಿಸಿ ಸಾವು-ನೋವು ಉಂಟು ಮಾಡಿತ್ತು. ಇಲ್ಲಿ ಕನಿಷ್ಠ 24 ಮಂದಿ ಸಾವಿಗೀಡಾಗಿದ್ದರು. ಬಳಿಕ ಫ್ಲೋರಿಡಾ ದ್ವೀಪದತ್ತ ಪ್ರಯಾಣಿಸಿದ್ದ ಇರ್ಮಾ ಚಂಡಮಾರುತ ಇಂದು ಫ್ಲೋರಿಡಾಗೆ ಅಪ್ಪಳಿಸಿದೆ. ಗಂಟೆಗೆ 260 ಕಿಮೀ ವೇಗದಲ್ಲಿ ಇರ್ಮಾ ಚಂಡಮಾರುತ ಫ್ಲೋರಿಡಾಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
USಅಮೆರಿಕFloridaಫ್ಲೋರಿಡಾಹವಾಮಾನ ಇಲಾಖೆಇರ್ಮಾ ಚಂಡಮಾರುತHurricane IrmaNational Weather ServiceTampa Seabedಟಂಪಾ ಬೀಚ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


