ಬಾಹ್ಯಾಕಾಶದಲ್ಲಿ 288 ದಿನ ಉಳಿದು 4623 ಭೂ ಪ್ರದಕ್ಷಿಣೆ ಬಂದ ಪೆಗ್ಗಿ ವಿಟ್ಸನ್
ನಾಸಾ ಗಗನಯಾತ್ರಿ ಪೆಗ್ಗಿ ವಿಟ್ಸನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ನಿಂದ ನಿರ್ಗಮಿಸಿದ್ದಾರೆ.

Published On :
ವಾಷಿಂಗ್ ಟನ್: ನಾಸಾ ಗಗನಯಾತ್ರಿ ಪೆಗ್ಗಿ ವಿಟ್ಸನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ನಿಂದ ನಿರ್ಗಮಿಸಿದ್ದಾರೆ. ಅವರು ದಾಖಲೆಯ 288 ದಿನಗಳ ಸುದೀರ್ಘ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಮರಳಲಿದ್ದಾರೆ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ವಿಟ್ಸನ್ 288 ದಿನಗಳ ಅವಧಿಯಲ್ಲಿ 4,623 ಬಾರಿ ಭೂ ಕಕ್ಷೆಯನ್ನು ಸುತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಶುಕ್ರವಾರ ರಾತ್ರಿ 9.22ಕ್ಕೆ ಸರಿಯಾಗಿ ಕಜಕಿಸ್ತಾನದ ಸೂಯೋಜ್ MS-04 ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯುವ ಮೂಲಕ ವಿಟ್ಸನ್ ತಮ್ಮ ಬಾಹ್ಯಾಕಾಶ ಪ್ರಯಾಣ ಮುಗಿಸಿ ಭೂಮಿಗೆ ವಾಪಾಸಾಗಿದ್ದಾರೆ.
2016 ರ ನವೆಂಬರ್ನಲ್ಲಿ ಬಾಹ್ಯಾಕಾಶ ಕಕ್ಷೆಗೆ ಹೊರಟ ವಿಟ್ಸನ್ ಈಗ ಮರಳಿದ್ದಾರೆ. ಈ ಅವಧಿಯಲ್ಲಿ 122.2 ದಶಲಕ್ಷ ಮೈಲುಗಳ ದೂರದ ಕಕ್ಷೆಯಲ್ಲಿ 4,623 ಬಾರಿ ಸುತ್ತಿದ್ದಾರೆ. ಇದು ಮೂರನೇ ಅತಿ ದೀರ್ಘಕಾಲಿಕ ಅವಧಿಯಾಗಿದೆ.
ಇದಕ್ಕೂ ಹಿಂದೆ ಸಹ ಕಕ್ಷೆಯಲ್ಲಿ ದೀರ್ಘಕಾಲ ಉಳಿದುಕೊಳ್ಳುವ ಪ್ರಯತ್ನ ನಡೆದಿತ್ತು, ಗಗನಯಾತ್ರಿ ಪೆಗ್ಗಿ ವಿಟ್ಸನ್ ಈವರೆಗೆ ಅತಿ ದೀರ್ಘ ಕಾಲ ಕಕ್ಷೆಯಲ್ಲಿ ಕಳೆದ ದಾಖಲೆ ಹೊಂದಿದ್ದಾರೆ. ಅವರು ಒಟ್ಟು 665 ದಿನಗಳ ಕಾಲ ಕಕ್ಷೆಯಲ್ಲಿ ಉಳಿದುಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
NasaPeggy WhitsonInternational Space Station (ISS)ನಾಸಾಪೆಗ್ಗಿ ವಿಟ್ಸನ್ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


