ಸಾವಿರ ಕಿ.ಮೀ. ಉದ್ದದ ಸುರಂಗ ತೋಡಲು ಯೋಜನೆ ವರದಿ ಸುಳ್ಳು: ಚೀನಾ
ಟಿಬೆಟ್ ನಲ್ಲಿರುವ ಬ್ರಹ್ಮಪುತ್ರ ನದಿಯನ್ನು ಹೈಜಾಕ್ ಮಾಡಲು 1 ಸಾವಿರ ಕಿ.ಮೀ ಉದ್ದದ ಸುರಂಗ ನಿರ್ಮಿಸುತ್ತಿರುವುದರ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಯೋಜನೆ ನಡೆಯುತ್ತಿರುವುದನ್ನು ಚೀನಾ

Published On :
ಬೀಜಿಂಗ್: ಟಿಬೆಟ್ ನಲ್ಲಿರುವ ಬ್ರಹ್ಮಪುತ್ರ ನದಿಯನ್ನು ಹೈಜಾಕ್ ಮಾಡಲು 1 ಸಾವಿರ ಕಿ.ಮೀ ಉದ್ದದ ಸುರಂಗ ನಿರ್ಮಿಸುತ್ತಿರುವುದರ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಯೋಜನೆ ನಡೆಯುತ್ತಿರುವುದನ್ನು ಚೀನಾ ಅಲ್ಲಗಳೆದಿದೆ.
ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಬ್ರಹ್ಮಪುತ್ರ ನದಿಯನ್ನು ತಿರುಗಿಸಲು 1 ಸಾವಿರ ಕಿ.ಮೀ ಉದ್ದದ ಸುರಂಗ ನಿರ್ಮಿಸುತ್ತಿರುವ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯೋಜನೆ ಸತ್ಯವಲ್ಲ, ಸುಳ್ಳು ವರದಿ ಎಂದು ಹೇಳಿದ್ದಾರೆ. ಗಡಿ ಪ್ರದೇಶದ ನದಿ ಸಹಕಾರಕ್ಕೆ ಚೀನಾ ಹೆಚ್ಚಿನ ಮಹತ್ವ ನೀಡುತ್ತದೆ ಎಂದು ಚೀನಾ ವಕ್ತಾರರು ಹೇಳಿದ್ದಾರೆ.
ಚೀನಾದ ಮರುಭೂಮಿ ಪ್ರದೇಶ ಕ್ಸಿನ್ ಜಿಯಾಂಗ್ ಪ್ರಾಂತ್ಯಕ್ಕೆ ನೀರುಣಿಸಲು ಚೀನಾ ಪ್ರಸ್ತುತ ಬ್ರಹ್ಮಪುತ್ರ ನದಿ ಸಾಗುತ್ತಿರುವ ಮಾರ್ಗವನ್ನೇ ಬದಲಿಸಿ, ಸುರಂಗ ಮೂಲಕ ನದಿಯ ನೀರನ್ನು ಕ್ಲಿನ್ ಜಿಯಾಂಗ್ ಪ್ರಾಂತ್ಯಕ್ಕೆ ಹರಿಯಬಿಡಲು ಯೋಜನೆ ರೂಪಿಸಿದೆ ಎಂಬ ಅವರದಿ ಪ್ರಕಟವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


