ವಿದೇಶ

ಭಾರತಕ್ಕೆ ಎಫ್-16, ಎಫ್-18 ಫೈಟರ್ ಜೆಟ್ ಮಾರಾಟಕ್ಕೆ ಟ್ರಂಪ್ ಆಡಳಿತದಿಂದ ದೃಢ ಬೆಂಬಲ

ಎಫ್-16, ಎಫ್ 18 ಫೈಟರ್ ಜೆಟ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಟ್ರಂಪ್ ಆಡಳಿತ ದೃಢ ಬೆಂಬಲ ಸೂಚಿಸಿದೆ.

ಭಾರತಕ್ಕೆ ಎಫ್-16, ಎಫ್-18 ಫೈಟರ್ ಜೆಟ್ ಮಾರಾಟಕ್ಕೆ ಟ್ರಂಪ್ ಆಡಳಿತದಿಂದ ದೃಢ ಬೆಂಬಲ
ಎಫ್-16, ಎಫ್-18 ಫೈಟರ್ ಜೆಟ್
Published On :
ವಾಷಿಂಗ್ ಟನ್: ಭಾರತದೊಂದಿಗೆ ಮುಖ್ಯ ರಕ್ಷಣಾ ಒಪ್ಪಂದಗಳನ್ನು ಯಶಸ್ವಿಗೊಳಿಸಲು ಅಮೆರಿಕ ಉತ್ಸುಕವಾಗಿದ್ದು, ಈ ಮೂಲಕ ವರ್ಗೀಕೃತ ಡಾಟಾ ಹಾಗೂ ಎಫ್-16, ಎಫ್ 18 ಫೈಟರ್ ಜೆಟ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಟ್ರಂಪ್ ಆಡಳಿತ ದೃಢ ಬೆಂಬಲ ಸೂಚಿಸಿದೆ. 
ಕಳೆದ ತಿಂಗಳು ಕಾಂಗ್ರೆಸ್ ಗೆ ಹೇಳಿಕೆ ನೀಡಿದ್ದ ಟ್ರಂಪ್ ಆಡಳಿತ, ಭಾರತಕ್ಕೆ ಎಫ್-16, ಎಫ್-18 ಫೈಟರ್ ಜೆಟ್ ಗಳನ್ನು ಮಾರಾಟ ಮಾಡುವುದನ್ನು ಅಮೆರಿಕ ಆಡಳಿತ ಬೆಂಬಲಿಸುತ್ತದೆ, ಈ ಪ್ರಸ್ತಾವನೆಯಿಂದ ಭಾರತ- ಅಮೆರಿಕ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳಲಿದೆ ಎಂದಿತ್ತು. 
ಉಭಯ ರಾಷ್ಟ್ರಗಳ ನಡುವೆ ಆಗಬೇಕಿರುವ ಮಹತ್ವದ ರಕ್ಷಣಾ ಒಪ್ಪಂದಗಳು ಹಲವಾರು ಇವೆ ಎಂದು ದಕ್ಷಿಣ ಹಾಗೂ ಕೇಂದ್ರ ಏಷ್ಯಾ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ ವೆಲ್ಸ್ ಹೇಳಿದ್ದಾರೆ. ಒಪ್ಪಂದಗಳು ಯಶಸ್ವಿಯಾಗುವುದರಿಂದ ಭಾರತಕ್ಕೆ ಎಫ್-16, ಎಫ್-18 ಫೈಟರ್ ಜೆಟ್ ಮಾರಾಟವನ್ನು ಸಾಧ್ಯವಾಗಿಸುವುದರ ಜತೆಗೆ ರಕ್ಷಣಾ ತಂತ್ರಜ್ಞಾನ ಪಾಲುದಾರಿಕೆಗೂ ಸಹಕಾರಿಯಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.