ವಿದೇಶ

ಸ್ಪ್ಯಾನಿಷ್ ಉಪ ಪ್ರಧಾನಿಗೆ ತಾತ್ಕಾಲಿಕವಾಗಿ ಕ್ಯಟಲೋನಿಯಾದ ಜವಾಬ್ದಾರಿ

ಸ್ಪೇನ್ ನಿಂದ ಸ್ವಾಯತ್ತತೆ ಘೋಷಿಸಿಕೊಂಡಿರುವ ಕ್ಯಟಲೋನಿಯಾ ಜವಾಬ್ದಾರಿಯನ್ನು ಸ್ಪ್ಯಾನಿಷ್ ಉಪ ಪ್ರಧಾನಿಗೆ ತಾತ್ಕಾಲಿಕವಾಗಿ ವಹಿಸಲಾಗಿದೆ.

ಸ್ಪ್ಯಾನಿಷ್ ಉಪ ಪ್ರಧಾನಿಗೆ ತಾತ್ಕಾಲಿಕವಾಗಿ ಕ್ಯಟಲೋನಿಯಾದ ಜವಾಬ್ದಾರಿ
ಕ್ಯಟಲೋನಿಯಾ
Published On :
ಮ್ಯಾಡ್ರಿಡ್: ಸ್ಪೇನ್ ನಿಂದ ಸ್ವಾಯತ್ತತೆ ಘೋಷಿಸಿಕೊಂಡಿರುವ ಕ್ಯಟಲೋನಿಯಾ ಜವಾಬ್ದಾರಿಯನ್ನು ಸ್ಪ್ಯಾನಿಷ್ ಉಪ ಪ್ರಧಾನಿಗೆ ತಾತ್ಕಾಲಿಕವಾಗಿ ವಹಿಸಲಾಗಿದೆ. 
ಸ್ಪ್ಯಾನಿಷ್ ಸರ್ಕಾರ ಅ.28 ರಂದು ಸ್ಪೇನ್ ನ ಉಪಪ್ರಧಾನಿ  ಸೊರಯಾ ಸಾನ್ಜ್ ಡಿ ಅವರಿಗೆ ಕ್ಯಟಲೋನಿಯಾದ ಜವಾಬ್ದಾರಿಯನ್ನು ವಹಿಸಲಾಗಿದೆ. ಅರೆ ಸ್ವಾಯತ್ತ ಪ್ರದೇಶವಾಗಿರುವ ಕ್ಯಟಲೋನಿಯಾದ ಮೇಲೆ ಸ್ಪೇನ್ ನೇರ ಆಡಳಿತ ಹೇರುವುದಕ್ಕೆ ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ಕ್ಯಟಲೋನಿಯಾದ ಸಂಸತ್ ಸ್ಪೇನ್ ನಿಂದ ಸ್ವಾಯತ್ತತೆ ಘೋಷಣೆ ಮಾಡಿಕೊಂಡಿತ್ತು. ಕ್ಯಟಲೋನಿಯಾದ ಸಂಸತ್ ನ ನಡೆಯ ಬೆನ್ನಲ್ಲೇ ಸ್ಪೇನ್ ಸೆನೆಟ್ ಅಲ್ಲಿನ ಪ್ರಧಾನಿಗೆ ಕ್ಯಟಲೋನಿಯಾ ಮೇಲೆ ನೇರ ಆಡಳಿತವನ್ನು ಹೇರುವ ಅಧಿಕಾರ ನೀಡಿತ್ತು. 
ಕ್ಯಟಲೋನಿಯಾ ಸ್ವಾಯತ್ತತೆ ಘೋಷಿಸಿಕೊಂಡ ನಂತರ ಹೇಳಿಕೆ ಬಿಡುಗಡೆ ಮಾಡಿದ್ದ ಸ್ಪ್ಯಾನಿಷ್ ಸರ್ಕಾರ ಕ್ಯಟಲೋನಿಯಾದ ನಾಯಕರು, ಸರ್ಕಾರದ ಸದಸ್ಯರನ್ನು ವಜಾಗೊಳಿಸಿರುವುದಾಗಿ ತಿಳಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.