ವಿದೇಶ

ಪಾಕಿಸ್ತಾನದಲ್ಲಿ ಟೊಮ್ಯಾಟೋ ದರ ಗಗನಕ್ಕೇರಲು ಭಾರತ ವಿರೋಧಿ ಮನಸ್ಥಿತಿಯೇ ಕಾರಣ: ಪಾಕ್ ಪತ್ರಿಕೆ

ಪಾಕಿಸ್ತಾನದಲ್ಲಿ ಟೊಮ್ಯಾಟೋ ದರ ಪ್ರತಿ ಕೆಜಿಗೆ 300 ಕೆಜಿಯಷ್ಟಾಗಿದ್ದು, ಭಾರತ ವಿರೋಧಿ ಮನಸ್ಥಿತಿಯೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಪತ್ರಿಕೆ ವಿಶ್ಲೇಷಿಸಿದೆ.

ಪಾಕಿಸ್ತಾನದಲ್ಲಿ ಟೊಮ್ಯಾಟೋ ದರ ಗಗನಕ್ಕೇರಲು ಭಾರತ ವಿರೋಧಿ ಮನಸ್ಥಿತಿಯೇ ಕಾರಣ: ಪಾಕ್ ಪತ್ರಿಕೆ
ಟೊಮ್ಯಾಟೋ
Published On :
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಟೊಮ್ಯಾಟೋ ದರ ಪ್ರತಿ ಕೆಜಿಗೆ 300 ಕೆಜಿಯಷ್ಟಾಗಿದ್ದು, ಭಾರತ ವಿರೋಧಿ ಮನಸ್ಥಿತಿಯೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಪತ್ರಿಕೆ ವಿಶ್ಲೇಷಿಸಿದೆ. 
ಡಾನ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಸರ್ಕಾರದ ನೀತಿಯನ್ನು ಟೀಕಿಸಲಾಗಿದ್ದು, ಸಾಮಾನ್ಯ ಸರಕುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶ ನೀಡದೇ ಭಾರತ ವಿರೋಧಿ ಮನಸ್ಥಿತಿ ಹೊಂದಿರುವುದೇ ಟೊಮ್ಯಾಟೋ ದರ ಗಗನಕ್ಕೆ ಏರಿಕೆಯಾಗಲು ಕಾರಣ ಎಂದು ಹೇಳಿದೆ. 
ರಾಜಕಾರಣಿಗಳು ಸೃಷ್ಟಿಸಿರುವ ಭಾರತ ವಿರೋಧಿ ಮನಸ್ಥಿತಿಯಿಂದ ಪಾಕಿಸ್ತಾನದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿರುವ ಪತ್ರಿಕೆ ಸರಕು ಆಮದು ಮಾಡಿಕೊಳ್ಳುವ ಮೂಲಕ ವಿದೇಶಿ ರೈತರಿಗೆ ಏಕೆ ಲಾಭ ಮಾಡಿಕೊಡಬೇಕು ಎಂದು ಪ್ರಶ್ನಿಸಿರುವ ಪಾಕ್ ಸಚಿವನ ವಿರುದ್ಧವೂ ಕಿಡಿ ಕಾರಿದ್ದು, ಕೊಳೆತ ಟೊಮ್ಯಾಟೋಗಳನ್ನು ಎಸೆಯುವ ಮೂಲಕ ಅಂತಹ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಹೇಳಿದೆ. ಅಷ್ಟೆ ಅಲ್ಲದೇ ಭಾರತದಿಂದ ಆಮದು ನಿಲ್ಲಿಸುವುದರ ಹಿಂದೆ ಪ್ರಭಾವಿ ಮಾಫಿಯಾ ಕೈವಾಡವಿದೆ ಎಂದು ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.