ವಿದೇಶ

ತೀವ್ರವಾದಿ ಇಸ್ಲಾಮಿಕ್ ಗುಂಪುಗಳ ರಾಜಕೀಯ ಪ್ರವೇಶ ಪಾಕಿಸ್ತಾನಕ್ಕೆ ಅಪಾಯಕಾರಿ: ತಜ್ಞರು

ಉಗ್ರವಾದಿಗಳನ್ನು ರಾಜಕೀಯಕ್ಕೆ ಬಿಟ್ಟುಕೊಳ್ಳುವುದು ಪಾಕಿಸ್ತಾನಕ್ಕೆ ಎಂದಿದ್ದರಕೂ ಆಪಾಯವೇ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೀವ್ರವಾದಿ ಇಸ್ಲಾಮಿಕ್ ಗುಂಪುಗಳ ರಾಜಕೀಯ ಪ್ರವೇಶ ಪಾಕಿಸ್ತಾನಕ್ಕೆ ಅಪಾಯಕಾರಿ: ತಜ್ಞರು
ಸಂಗ್ರಹ ಚಿತ್ರ
Published On :
ಇಸ್ಲಾಮಾಬಾದ್: ಉಗ್ರವಾದಿಗಳನ್ನು ರಾಜಕೀಯಕ್ಕೆ ಬಿಟ್ಟುಕೊಳ್ಳುವುದು ಪಾಕಿಸ್ತಾನಕ್ಕೆ ಎಂದಿದ್ದರಕೂ ಆಪಾಯವೇ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾನೂನುಬಾಹಿರ ಇಸ್ಲಾಮಿಕ್ ಧಾರ್ಮಿಕ ಗುಂಪುಗಳ ರಾಜಕೀಯ ಪಕ್ಷಗಳಿಂದ ಪಾಕಿಸ್ತಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪಂಜಾಬ್ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕ ಮಹಮದ್ ದೈಮ್ ಫೈಜಲ್ ಅವರು ಹೇಳಿದ್ದಾರೆ.  ಪಾಕಿಸ್ತಾನದ ಸಿಯಾಲ್ ಕೋಟ್ ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಮದ್ ದೈಮ್ ಫೈಜಲ್ ಅವರು, ಈಗಾಗಲೇ ಪಾಕಿಸ್ತಾನ ಸಾಕಷ್ಟು ಸಮಸ್ಯೆಗಳಿಂದ ಅವಸ್ಥೆ ಪಡುತ್ತಿದೆ. ಹೀಗಿರುವಾಗ  ಕಾನೂನುಬಾಹಿರ ಇಸ್ಲಾಮಿಕ್ ಧಾರ್ಮಿಕ ಗುಂಪುಗಳು ರಾಜಕೀಯ ಪ್ರವೇಶ ಮಾಡಿದ್ದೇ ಆದರೆ ಅವುಗಳಿಂದ ಪಾಕಿಸ್ತಾನಕ್ಕೆ ಅಪಾಯ ಖಂಡಿತಾ ಎಂದು ಹೇಳಿದ್ದಾರೆ.
ತಮ್ಮ "ಮೇನ್ ಸ್ಟ್ರೀಮಿಂಗ್ ಇಸ್ಲಾಮಿಸ್ಟ್ಸ್: ಎ ಡೇಂಜರಸ್ ಚಾಯ್ಸ್ ಫಾರ್ ಪಾಕಿಸ್ತಾನ್ " ("Mainstreaming Islamists: A Dangerous Choice for Pakistan") ಲೇಖನದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿರುವ  ಉಪನ್ಯಾಸಕ ಮಹಮದ್ ದೈಮ್ ಫೈಜಲ್ ಅವರು "ಇಸ್ಲಾಮಿಕ್ ಉಗ್ರವಾದಿಗಳಿಗೆ ಅವಕಾಶ ಮಾಡಿಕೊಟ್ಟ ಬಳಿಕ ಪಾಕಿಸ್ತಾನದಲ್ಲಿ ನಡೆದ ಕಹಿಘಟನೆಗಳು ಇನ್ನೂ ಹಸಿರಾಗಿಯೇ ಇವೆ. ಪೇಶಾವರ ಶಾಲೆ ಮೇಲಿನ ದಾಳಿ,  ಲಾಹೋರ್ ಕ್ರಿಕೆಟಿಗರ ಮೇಲಿನ ದಾಳಿ ಪಾಕಿಸ್ತಾನವನ್ನು ವಿಶ್ವ ಸಮುದಾಯದ ಮುಂದು ಮುಜುಗರಕ್ಕೀಡಾಗುವಂತೆ ಮಾಡಿದೆ. ಇನ್ನು ಕೆಲ ಸಂಘಟನೆಗಳಂತೂ ಉಗ್ರತ್ವದ ಮೂಲಕವೇ ಈ ಸಂಘಟನೆಗಳು ರಾಜಕೀಯದಲ್ಲಿ  ಗುರುತಿಸಿಕೊಳ್ಳಲು ಹವಣಿಸುತ್ತಿವೆ. ಇದಕ್ಕೆ ಪಾಕಿಸ್ತಾನದಲ್ಲಿ ನಡೆದ ಕೆಲ ಚುನಾವಣೆಗಳು ಉದಾಹರಣೆಯಂತಿದ್ದು, ವೃತ್ತಿಪರ ರಾಜಕಾರಣಿಗಳಿಗಿಂತಲೂ ಉಗ್ರತ್ವದ ಮೂಲಕ ಗುರುತಿಸಿಕೊಂಡ ಕೆಲ ಮುಖಂಡರು ರಾಜಕೀಯದಲ್ಲಿ  ಜಯಿಸಿರುವುದು ಪಾಕ್ ಆತಂಕ ಹೆಚ್ಚಾಗುವಂತೆ ಮಾಡಿದೆ. 
ರಾಜಕೀಯದಲ್ಲಿ ಉಗ್ರವಾದಿಗಳ ಪ್ರವೇಶ ನಿಜಕ್ಕೂ ಪಾಕಿಸ್ತಾನದ ಹಿತಾಸಕ್ತಿಗೆ ಧಕ್ಕೆ ತರಲಿದ್ದು, ಉಗ್ರರಿಗೆ ರಾಜಕೀಯದಲ್ಲಿ ಪ್ರವೇಶ ಕಲ್ಪಿಸುವ ಮೂಲಕ ಸರ್ಕಾರ ಅದು ಹೇಗೆ ಭಯೋತ್ಪಾದನೆಯನ್ನು ನಿಗ್ರಹಿಸುತ್ತದೆ ಎಂದು  ಮಹಮದ್ ದೈಮ್ ಫೈಜಲ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.