ವಿದೇಶ

ಪಾಕಿಸ್ತಾನ ವಿರುದ್ಧ ಹೋರಾಡಲು ಭಾರತ ಅಮೆರಿಕಾಕ್ಕೆ ಸಹಾಯ ಮಾಡಬಹುದು: ನಿಕ್ಕಿ ಹ್ಯಾಲೆ

ಭಯೋತ್ಪಾದಕರಿಗೆ ಆಶ್ರಯ ನೀಡುವ ಪಾಕಿಸ್ತಾನ ವಿರುದ್ಧ ದೃಢ ನಿಲುವು ತಳೆದಿರುವ ಅಮೆರಿಕಾಕ್ಕೆ ಭಾರತ ....

ಪಾಕಿಸ್ತಾನ ವಿರುದ್ಧ ಹೋರಾಡಲು ಭಾರತ ಅಮೆರಿಕಾಕ್ಕೆ ಸಹಾಯ ಮಾಡಬಹುದು: ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ
Published On :
ವಾಷಿಂಗ್ಟನ್: ಭಯೋತ್ಪಾದಕರಿಗೆ ಆಶ್ರಯ ನೀಡುವ ಪಾಕಿಸ್ತಾನ ವಿರುದ್ಧ ದೃಢ ನಿಲುವು ತಳೆದಿರುವ ಅಮೆರಿಕಾಕ್ಕೆ ಭಾರತ ನೆರವು ನೀಡಬಹುದು ಎಂದು ವಿಶ್ವಸಂಸ್ಥೆಗೆ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಅಫ್ಘಾನಿಸ್ತಾನ ಮತ್ತು ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಹೊಸ ಕಾರ್ಯತಂತ್ರವನ್ನು ರೂಪಿಸುವುದಾಗಿ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಘೋಷಿಸಿದ್ದು ಆ ಕಾರ್ಯತಂತ್ರಗಳಲ್ಲಿ ಪ್ರಮುಖ ಆಧಾರ ಸ್ಥಂಭ ಭಾರತದೊಂದಿಗೆ ಅಮೆರಿಕಾದ ರಚನಾತ್ಮಕ ಸಹಭಾಗಿತ್ವವಾಗಿದೆ ಎಂದರು.
ಅಫ್ಘಾನಿಸ್ತಾನ ಮತ್ತು ಇಡೀ ದಕ್ಷಿಣ ಏಷ್ಯಾದಲ್ಲಿ ಭದ್ರತೆಗೆ ಧಕ್ಕೆಯಾಗಿರುವ ಭಯೋತ್ಪಾದನೆಯನ್ನು ಹೊಡೆದೋಡಿಸುವ ಬಗ್ಗೆ ಅಮೆರಿಕಾ ಆಸಕ್ತಿ ಹೊಂದಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಭಯೋತ್ಪಾದಕರ ಕೈಯಿಂದ ದೂರವಿರಿಸಲು ನಾವು ಸಾಧ್ಯವಾದ ಎಲ್ಲಾ ಅಂಶಗಳನ್ನು ಬಳಸುತ್ತಿದ್ದೇವೆ. ಈ ಗುರಿಯನ್ನು ಸಾಧಿಸಲು ಆರ್ಥಿಕ ರಾಜತಾಂತ್ರಿಕತೆ ಮತ್ತು ಮಿಲಿಟರಿ ಶಕ್ತಿಗಳು ಮುಖ್ಯವಾಗಿರುತ್ತದೆ ಎಂದು ನಿಕ್ಕಿ ಹ್ಯಾಲೆ ಹೇಳಿದ್ದಾರೆ. 
ವಿಮರ್ಶಾತ್ಮಕವಾಗಿ ನಾವು ಭಾರತದೊಂದಿಗೆ ಆರ್ಥಿಕ ಮತ್ತು ಭದ್ರತೆ ಪಾಲುದಾರಿಕೆಯನ್ನು ನೋಡುತ್ತಿದ್ದೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.