ವಿದೇಶ

ಹಳಿತಪ್ಪಿಸುವ ಯತ್ನಗಳ ಹೊರತಾಗಿಯೂ ಸಾಕಷ್ಟು ನಯವಾಗಿ ಜಿಎಸ್ ಟಿ ಜಾರಿಗೊಳಿಸಿದ್ದೇವೆ: ಜೇಟ್ಲಿ

ಮಾಹಿತಿ ಗೊತ್ತಿಲ್ಲದ ಪ್ರತಿಪಕ್ಷ ನಾಯಕರು ಜಿಎಸ್ ಟಿ ಜಾರಿಯನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವುದರ ಹೊರತಾಗಿಯೂ ಭಾರತ...

ಹಳಿತಪ್ಪಿಸುವ ಯತ್ನಗಳ ಹೊರತಾಗಿಯೂ ಸಾಕಷ್ಟು ನಯವಾಗಿ ಜಿಎಸ್ ಟಿ ಜಾರಿಗೊಳಿಸಿದ್ದೇವೆ: ಜೇಟ್ಲಿ
ಅರುಣ್ ಜೇಟ್ಲಿ
Published On :
ನ್ಯೂಯಾರ್ಕ್: ಮಾಹಿತಿ ಗೊತ್ತಿಲ್ಲದ ಪ್ರತಿಪಕ್ಷ ನಾಯಕರು ಜಿಎಸ್ ಟಿ ಜಾರಿಯನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವುದರ ಹೊರತಾಗಿಯೂ ಭಾರತ ಐತಿಹಾಸಿಕ ತೆರಿಗೆ ಸುಧಾರಣೆಗೆ ಪರಿವರ್ತನೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಹೇಳಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ನ ಸಭೆಗಳಲ್ಲಿ ಭಾಗವಹಿಸುವುದಕ್ಕಾಗಿ ಒಂದು ವಾರಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಜೇಟ್ಲಿ ಅವರು, ಕೇಂದ್ರ ಸರ್ಕಾರ ಜಿಎಸ್ ಟಿ ಅಡಿ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ ಎಂದು ಹೇಳಿದ್ದಾರೆ.
ಇಂದು ನ್ಯೂಯಾರ್ಕ್ ನಲ್ಲಿ ಭಾರತದ ಮಾರುಕಟ್ಟೆ ಸುಧಾರಣೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಜೇಟ್ಲಿ, ಜಿಎಸ್ ಟಿಯ ಹಳಿ ತಪ್ಪಿಸುವುದಕ್ಕಾಗಿ ರಾಜಕೀಯ ಗುಂಪುಗಳು ಹಲವು ಯತ್ನ ನಡೆಸಿದ್ದವು. ಆದರೆ ಅವರದೇ ರಾಜ್ಯ ಸರ್ಕಾರಗಳು ಅವರ ಮಾತು ಕೇಳದಿರುವುದಕ್ಕೆ ನನಗೆ ಖುಷಿಯಾಗಿದೆ. ಏಕೆಂದರೆ ಅವರಿಗೆ ಗೊತ್ತು ಶೇ.80ರಷ್ಟು ಹಣ ಕೇಂದ್ರದಿಂದ ತಮಗೆ ಬರುತ್ತದೆ ಅಂತ. ಹೀಗಾಗಿ ಮಾಹಿತಿ ಗೊತ್ತಿಲ್ಲದ ತಮ್ಮ ಕೇಂದ್ರ ನಾಯಕರ ಮಾತು ಕೇಳಿ ರಾಜ್ಯಕ್ಕೆ ಬರುವ ಆದಾಯವನ್ನು ಅವರು ಕಳೆದುಕೊಳ್ಳಲು ಸಿದ್ಧರಿರಲಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.