ಮಗನಿಗೆ ಲಸಿಕೆ ಕೊಡಿಸದ ಅಮೆರಿಕಾದ ತಾಯಿಗೆ ಒಂದು ವಾರ ಜೈಲು ಶಿಕ್ಷೆ !
ಸಮಯಕ್ಕೆ ಸರಿಯಾಗಿ ತನ್ನ ಮಗನಿಗೆ ಲಸಿಕೆ ಹಾಕಿಸದಿದ್ದ ಅಮೆರಿಕಾದ ಮಹಿಳೆಗೆ ಏಳು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕಾ ....

Published On :
ವಾಷಿಂಗ್ಟನ್: ಸಮಯಕ್ಕೆ ಸರಿಯಾಗಿ ತನ್ನ ಮಗನಿಗೆ ಲಸಿಕೆ ಹಾಕಿಸದಿದ್ದ ಅಮೆರಿಕಾದ ಮಹಿಳೆಗೆ ಏಳು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕಾ ಮಾಧ್ಯಮವೊಂದು ವರದಿ ಮಾಡಿದೆ.
ರೆಬೆಕ್ಕಾ ಬ್ರೆಡೊ ಎಂಬ ಡೆಟ್ರಾಯಿಟ್ ಪ್ರದೇಶದ ಮಹಿಳೆ ಓಕ್ ಲ್ಯಾಂಡ್ ಕೌಂಟಿ ಸರ್ಕ್ಯುಟ್ ಕೋರ್ಟ್ ನಲ್ಲಿ ಹಾಜರಾದಾಗ ನ್ಯಾಯಾಧೀಶ ಕರೆನ್ ಮೆಕ್ ಡೊನಾಲ್ಡ್ ವಿಚಾರಣೆ ನಡೆಸಿ ನ್ಯಾಯಾಂಗ ನಿಂದನೆ ಆರೋಪ ಹೊರಿಸಿದರು. ಏಳು ದಿನಗಳೊಳಗೆ ಆಕೆಯ ಮಗನಿಗೆ ಹಾಕಿಸದಿರುವ ಎಲ್ಲಾ ಲಸಿಕೆಗಳನ್ನು ಒಂದು ವಾರದೊಳಗೆ ಹಾಕಿಸುವಂತೆ ಆದೇಶ ನೀಡಿದರು. ಅದಕ್ಕೆ ಆಕೆ ನಿರಾಕರಿಸಿದಾಗ ಒಂದು ವಾರದ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರಾಗಿದ್ದ ಮಗುವಿನ ತಾಯಿ ಬ್ರೆಡೊ ಮಗುವಿಗೆ ಲಸಿಕೆ ಕೊಡಿಸದಿರುವುದಕ್ಕೆ ತಾನೇ ಸಂಪೂರ್ಣ ಜವಾಬ್ದಾರಳಾಗಿದ್ದು ತನಗೆ ಈ ಲಸಿಕೆ ಕೊಡಿಸುವುದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾಳೆ.
ಕಳೆದ ವಾರ ಎಬಿಸಿ ನ್ಯೂಸ್ ಎಂಬ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬ್ರೆಡೊ, ತನ್ನ 9 ವರ್ಷದ ಮಗನಿಗೆ ಲಸಿಕೆ ಹಾಕಿಸುವ ಬದಲು ಒಂದು ವಾರ ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ್ದಾಳೆ. ಮಕ್ಕಳಿಗೆ ಲಸಿಕೆ ಹಾಕಿಸುವುದು, ಬಿಡುವುದು ಪೋಷಕರ ವೈಯಕ್ತಿಕ ಆಯ್ಕೆ ಹೇಳಿದ್ದಾಳೆ.
ಮಿಚಿಗನ್ ರಾಜ್ಯ ಸರ್ಕಾರ ಕೆಲವು ವೈದ್ಯಕಿಯೇತರ ಕಾರಣಗಳಿಗಾಗಿ ಕೆಲವು ಲಸಿಕೆಗಳನ್ನು ಕೊಡಿಸದಿರುವುದಕ್ಕೆ ಪೋಷಕರಿಗೆ ಅನುವು ಮಾಡಿಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


