ವಿದೇಶ

ಪ್ರಧಾನಿ ನರೇಂದ್ರ ಮೋದಿ ಓರ್ವ ಚುನಾಯಿತ ಭಯೋತ್ಪಾದಕ: ಪಾಕ್ ವಿದೇಶಾಂಗ ಸಚಿವ

ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಚುನಾಯಿತ ಭಯೋತ್ಪಾದಕ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಆಸಿಫ್ ಕರೆದಿದ್ದಾರೆ...

ಪ್ರಧಾನಿ ನರೇಂದ್ರ ಮೋದಿ ಓರ್ವ ಚುನಾಯಿತ ಭಯೋತ್ಪಾದಕ: ಪಾಕ್ ವಿದೇಶಾಂಗ ಸಚಿವ
ನರೇಂದ್ರ ಮೋದಿ-ಖವಾಜಾ ಆಸಿಪ್
Published On :
ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಚುನಾಯಿತ ಭಯೋತ್ಪಾದಕ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಆಸಿಫ್ ಕರೆದಿದ್ದಾರೆ. 
ವಿಶ್ವಸಂಸ್ಥೆಯ ವಾರ್ಷಿಕ ಮಹಾ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಕಾರ್ಖಾನೆ ಎಂದು ಟೀಕಿಸಿದ್ದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಷಣದ ಕುರಿತು ಪ್ರತಿಕ್ರಿಯಿಸಿದ ಆಸಿಫ್ ಭಾರತದ ಪ್ರಧಾನಿಯೇ ಓರ್ವ ಭಯೋತ್ಪಾದಕ. ಗುಜರಾತ್ ಮುಸ್ಲಿಂರ ಮಾರಣಹೋಮ ನಡೆಸಿದ ರಕ್ತ ಆತನ ಕೈಯಿಂದ ಇನ್ನೂ ಮಾಸಿಲ್ಲ ಎಂದು ಆರೋಪಿಸಿದ್ದಾರೆ. 
ಇದೇ ವೇಳೆ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಎಂಬ ಭಯೋತ್ಪಾದಕ ಸಂಘಟನೆ ಭಾರತವನ್ನು ಆಳುತ್ತಿದೆ. ಇಂತಹ ಸಂಘಟನೆಯಿಂದ ಬಂದಿರುವ ಪ್ರಧಾನಿ ಮೋದಿ ಚುನಾಯಿತ ಭಯೋತ್ಪಾದಕ ಎಂದು ಜರಿದಿದ್ದಾರೆ. 
ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಜಗತ್ತಿನಾದ್ಯಂತ ಧನಿ ಎತ್ತುತ್ತಾ ಬಂದಿದ್ದರು. ಇದರ ಫಲವಾಗಿಯೇ ಪಾಕಿಸ್ತಾನ ಭಯೋತ್ಪಾದಕರಿಗೆ ಆರ್ಥಿಕ ನೆರವು ಹಾಗೂ ನೆಲೆ ನೀಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಆರೋಪಿಸಿದ್ದರು. ಇದಾದ ನಂತರ ವಿಶ್ವದ ದಿಗ್ಗಜ ನಾಯಕರು ಸಹ ಇದೇ ಮಾತನ್ನು ಹೇಳಿದ್ದರು. 
ಇದೀಗ ಜಗತ್ತೇ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಕರೆಯುತ್ತಿರುವುದರ ಮಧ್ಯೆ ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಆಸಿಫ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.